Advertisement

Solar; ಸೌರ ಫ‌ಲಕದಲ್ಲಿ ಸ್ವಾವಲಂಬನೆಯತ್ತ ಭಾರತ: ವರದಿಯಲ್ಲಿ ಉಲ್ಲೇಖ

08:54 PM Sep 14, 2023 | Team Udayavani |

ನವದೆಹಲಿ: ಸೌರ ವಿದ್ಯುತ್‌ ಫ‌ಲಕಗಳಲ್ಲಿ ಸ್ವಾವಲಂಬನೆ ಸಾಧಿಸುವತ್ತ ಭಾರತ ಹೆಜ್ಜೆಯಿಟ್ಟಿದೆ. ಚೀನಾದಿಂದ ಸೌರಫ‌ಲಕಗಳ ಆಮದು ಪ್ರಮಾಣ ಶೇ.76ರಷ್ಟು ತಗ್ಗಿದ್ದು, ದೇಶದಲ್ಲಿಯೇ ಅವುಗಳ ಉತ್ಪಾದನೆ ಹೆಚ್ಚಳವಾಗಿರುವುದೇ ಇದಕ್ಕೆ ಕಾರಣ. ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಚಿಂತಕರ ಚಾವಡಿ “ಎಂಬರ್‌’ ತನ್ನ ವರದಿಯಲ್ಲಿ ಈ ಅಂಶ ಉಲ್ಲೇಖೀಸಿದೆ.

Advertisement

2022ರ ಮೊದಲ ಭಾಗದಲ್ಲಿ ಆಮದು ಪ್ರಮಾಣ 9.8 ಗಿಗಾ ವ್ಯಾಟ್‌ ಇದ್ದದ್ದು, 2023ರ ಮೊದಲಾರ್ಧಕ್ಕೆ 2.3 ಗಿಗಾವ್ಯಾಟ್‌ಗೆ ಇಳಿಕೆಯಾಗಿದೆ. ಆದರೆ, ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಆಮದು ಮಾಡಿಕೊಳ್ಳುವ ಪ್ರಮಾಣ ಗಣನೀಯವಾಗಿ ತಗ್ಗಿಲ್ಲ. ಭಾರತದಲ್ಲಿ ಸೌರ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಮದು ಪ್ರಮಾಣ ತಗ್ಗಿಸಿ, ಫ‌ಲಕಗಳನ್ನು ದೇಶದಲ್ಲಿಯೇ ಉತ್ಪಾದನೆ ಮಾಡಿಕೊಳ್ಳಲು ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಸೌರ ವಿದ್ಯುತ್‌ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ ಎಂದು ಎಂಬರ್‌ ಸಂಸ್ಥೆಯಲ್ಲಿರುವ ವಿದ್ಯುತ್‌ ಕ್ಷೇತ್ರದ ನೀತಿಗಳ ವಿಶ್ಲೇಷಕ ನೆಶ್ವಿ‌ನ್‌ ರೋಡ್ರಿಗಸ್‌ ಹೇಳಿದ್ದಾರೆ. 2022ರ ಏಪ್ರಿಲ್‌ನಿಂದ ದೇಶದಲ್ಲಿ ಸೌರ ಕೋಶಗಳು, ಫ‌ಲಕಗಳ ಉತ್ಪಾದನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರಮವಾಗಿ ಶೇ.40, ಶೇ.25 ಸುಂಕ ವಿಧಿಸಲು ಶುರು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next