Advertisement

ಸರಣಿ ಕೈ ತಪ್ಪಿದರೂ ಬಾಂಗ್ಲಾ ವಿರುದ್ದ ಭರ್ಜರಿ ಗೆಲುವು ಸಾಧಿಸಿದ ಟೀಮ್ ಇಂಡಿಯಾ

07:14 PM Dec 10, 2022 | Team Udayavani |

ಚತ್ತೋಗ್ರಾಮ್‌: ಬಾಂಗ್ಲಾದೇಶ ವಿರುದ್ದದ ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲೆರಡನ್ನು ಸೋತು ಸರಣಿ ಕಳೆದುಕೊಂಡಿದ್ದ ಟೀಮ್‌ ಇಂಡಿಯಾ ಶನಿವಾರ ನಡೆದ ಮೂರನೇ ಏಕದಿನ ಪಂದ್ಯ ವನ್ನು ಭರ್ಜರಿಯಾಗಿ ಗೆದ್ದು ವೈಟ್‌ವಾಶ್‌ ತಪ್ಪಿಸಿಕೊಂಡಿದೆ.

Advertisement

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶದ ಬೌಲಿಂಗ್ ಇಂದು ಕೈಕೊಟ್ಟಿತು. ಭಾರತದ ಆರಂಭಿಕ ಆಟಗಾರ ಇಶಾನ್ ಕಿಶನ್ ಅವರ ಅಬ್ಬರಕ್ಕೆ ತತ್ತರಿಸಿ ಹೋಯಿತು. ನಿಗದಿತ 50 ಓವರ್ ಗಳಲ್ಲಿ ಇಶಾನ್ ಅವರ ಅಮೋಘ ದ್ವಿಶತಕ ಮತ್ತು ವಿರಾಟ್ ಕೊಹ್ಲಿ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ 8 ವಿಕೆಟ್ ಗಳ ನಷ್ಟಕ್ಕೆ ಬರೋಬ್ಬರಿ 409 ರನ್ ಗಳನ್ನು ಕಲೆ ಹಾಕಿತು.

131 ಎಸೆತಗಳಲ್ಲಿ ಇಶಾನ್ 10 ಸಿಕ್ಸರ್ ಮತ್ತು 24 ಬೌಂಡರಿಗಳ ನೆರವಿನಿಂದ 210 ರನ್ ಗಳಿಸಿ ಔಟಾದರು. ತಂಡದ ಮೊತ್ತ 15 ಆಗಿದ್ದ ವೇಳೆ ಶಿಖರ್ ಧವನ್ ನಿರ್ಗಮಿಸಿದ ಬಳಿಕ ಭರ್ಜರಿ ಜೊತೆಯಾಟವಾಡಿದ ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ 250 ರನ್ ಗಳ ನ್ನು ಎರಡನೇ ವಿಕೆಟ್ ಗೆ ಕಲೆ ಹಾಕಿದರು. ಕೊಹ್ಲಿ 91 ಎಸೆತಗಳಿಂದ 113 ರನ್ ಗಳಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಅವರ 72ನೇ ಶತಕವಾಗಿದೆ. ಏಕದಿನದಲ್ಲಿ ಅವರ 44ನೇ ಶತಕವಾಗಿದೆ.

ಶ್ರೇಯಸ್ ಅಯ್ಯರ್ 3, ರಾಹುಲ್ 8, ಅಕ್ಪರ್ ಪಟೇಲ್ 20 ,ವಾಷಿಂಗ್ಟನ್ ಸುಂದರ್ 37, ಶಾರ್ದೂಲ್ ಠಾಕೂರ್ 3 ಮತ್ತು ಕುಲದೀಪ್ ಯಾದವ್ ಔಟಾಗದೆ 3 ರನ್ ಗಳಿಸಿದರು.

ಭಾರಿ ಗುರಿ ಬೆನ್ನಟ್ಟಿದ ಬಾಂಗ್ಲಾ ದೇಶ 34 ಓವರ್ ಗಳಲ್ಲೇ 182 ರನ್ ಗಳಿಗೆ ಆಲೌಟಾಗುವ ಮೂಲಕ 227 ದಾಖಲೆಯ ಅಂತರದ ಸೋಲು ಅನುಭವಿಸಿತು. ಪುರುಷರ ಏಕದಿನ ಪಂದ್ಯದಲ್ಲಿ ಭಾರತ ಮೂರನೇ ಅತಿ ದೊಡ್ಡ ಅಂತರದ ಗೆಲುವನ್ನು ದಾಖಲಿಸಿದೆ.

Advertisement

ನಾಯಕ ಲಿಟ್ಟನ್ ದಾಸ್ 29 , ಯಾಸಿರ್ ಅಲಿ 25, ಶಕೀಬ್ ಅಲ್ ಹಸನ್ 43,ಮಹಮುದುಲ್ಲಾ20, ತಸ್ಕಿನ್ ಅಹ್ಮದ್ 17 ಮತ್ತು ಮುಸ್ತಾಫಿಜುರ್ ರೆಹಮಾನ್ 13 ರನ್ ಗಳಿಸಿದರು. ಉಳಿದ ಆಟಗಾರರು ಒಂದಂಕಿ ದಾಟಲಿಲ್ಲ. ಭಾರತದ ಪರ ಬೌಲಿಂಗ್ ನಲ್ಲಿ ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದು ಮಿಂಚಿದರು. ಅಕ್ಪರ್ ಪಟೇಲ್ ಮತ್ತು ಉಮ್ರಾನ್ ಮಲಿಕ್ ತಲಾ 2 ವಿಕೆಟ್ ಪಡೆದರೆ, ಸಿರಾಜ್, ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next