ಮುಂಬಯಿ: ಇಂಡಿಯಾ ಟುಡೇ ನಡೆಸಿದ ಟಾಪ್ ಡಾಕ್ಟರ್ಸ್ ಇನ್ ಮುಂಬಯಿ- 2021 ಸಮೀಕ್ಷೆಯಲ್ಲಿ ಮುಂಬಯಿಯ ವೈದ್ಯರ ಪಟ್ಟಿಯಲ್ಲಿ ತುಳು, ಕನ್ನಡಿಗ ಡಾ| ಸದಾ ನಂದ ಆರ್. ಶೆಟ್ಟಿ ಸ್ಥಾನ ಪಡೆದಿದ್ದಾರೆ.
ಮುಂಬಯಿಯಲ್ಲಿನ ಆಸ್ಪತ್ರೆ ಮತ್ತು ಆರೋಗ್ಯ ಚಿಕಿತ್ಸಾಲಯಗಳಲ್ಲಿನ ವೈದ್ಯ ಕೀಯ ವಿಭಾಗಗಳ ಅತ್ಯುತ್ತಮ ಸೇವೆಯನ್ನು ಮಾನದಂಡ ವಾಗಿರಿಸಿ ಹೆಲ್ತ್ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆ ಯಲ್ಲಿ ಸರ್ವೋತ್ಕೃಷ್ಟ ಸೇವೆಗೈದ ವೈದ್ಯರ ಹೆಸರುಗಳನ್ನು ಪರಿಗಣಿಸಿ ಆಯ್ಕೆ ನಡೆಸಿತ್ತು. ಮುಂಬಯಿ ಮಹಾ ನಗರದಲ್ಲಿರುವ ಹಿರಿಯ ವೈದ್ಯರ ಸರ್ವೇ ಆಧಾರದ ಮೇಲೆ ಈ ಆಯ್ಕೆ ನಡೆಸಲಾಗಿದ್ದು, ಡಿಜಿ ಮೀಡಿಯಾ ಇನ್ ಕಾರ್ಪೊರೇಶನ್ ಈ ಸಮೀಕ್ಷೆಯನ್ನು ಪ್ರಕಟಿಸಿದೆ.
ಡಾ| ಸದಾನಂದ ಆರ್. ಶೆಟ್ಟಿ ಮೂಲತಃ ಶಿರ್ವದ ರಘುನಾಥ್ ಶೆಟ್ಟಿ ಮತ್ತು ಮೂಲ್ಕಿ ಅತಿಕಾರಿ ಬೆಟ್ಟು ದೆಪ್ಪಣಿಗುತ್ತು ಗುಲಾಬಿ ಶೆಟ್ಟಿ ದಂಪತಿಯ ಪುತ್ರರಾಗಿರುವ ಸದಾನಂದ ಆರ್. ಶೆಟ್ಟಿ ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದವರು. ಡಿಎಂ (ಡಾಕ್ಟರೇಟ್ ಆಫ್ ಮೆಡಿಸಿನ್-ಹೃದ್ರೋಗ), ಎಂಡಿ (ಡಾಕ್ಟರ್ ಆಫ್ ಮೆಡಿಸಿನ್-ಮೆಡಿಕಲ್) ಸಹಿತ ಹತ್ತಾರು ವೈದ್ಯಕೀಯ ಪದವಿಗಳನ್ನು ಪಡೆದಿರುವ ಇವರು ನವಿ ಮುಂಬಯಿ ಯ ಡಾ| ಡಿ. ವೈ. ಪಾಟೀಲ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಇದರ ವಿಶ್ರಾಂತ ಪ್ರಾಧ್ಯಾಪಕರಾಗಿದ್ದಾರೆ.
ಇದನ್ನೂ ಓದಿ:ಇನ್ಮುಂದೆ ವಾಟ್ಸ್ಯಾಪ್ ಮೂಲಕವೂ ಲಸಿಕೆಯ ಸ್ಲಾಟ್ ಬುಕ್ ಮಾಡಬಹುದು : ಕೇಂದ್ರ
ಸಿವಿಡಿ ಇಂಡಿಯಾ ಮತ್ತು ಸಿಸಿಎ ಇಂಟರ್‌ನ್ಯಾಶನಲ್ ಇವುಗಳ ಸ್ಥಾಪಕ ಮತ್ತು ಸದಾನಂದ್ ಜಿ2ಎಸ್2 ಫೌಂಡೇಶನ್ ಇದರ ಸ್ಥಾಪಕರಾಗಿರುವ ಇವರು, ಪ್ರಸ್ತುತ ಸೋಮಯ್ಯ ಸೂಪರ್ ಸ್ಪೆಷಾಲಿಟಿ ಇನ್‌ಸ್ಟಿಟ್ಯೂಟ್ ಮುಂಬಯಿ ಇದರ ಹೃದಯಶಾಸ್ತ್ರ ವಿಭಾಗದ ನಿರ್ದೇಶಕರಾಗಿ, ಸದಾನಂದ್ ಹೆಲ್ತಿ ಲಿವಿಂಗ್ ಸೆಂಟರ್ ಲಿ. ಮುಂಬಯಿ ಇದರ ಸ್ಥಾಪಕ ಮತ್ತು ಕಾರ್ಯಾಧ್ಯಕ್ಷರಾಗಿ, ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಕಾರ್ಡಿಯಾಲಜಿ ಸೊಸೈಟಿ ಆಫ್ ಇಂಡಿಯಾ ಮುಂಬಯಿ ಇದರ ಅಧ್ಯಕ್ಷರಾಗಿ, ಕಾರ್ಡಿಯಾಲಜಿ “ಕ್ಲಿನಿಕಲ್ ಕೇಸಸ್’ ಮ್ಯಾಗಜಿನ್ ಇದರ ಸಂಪಾದಕರಾಗಿ, ಜೀವನಚರಿತ್ರೆ ಮತ್ತು ರೋಗಿಗಳ ಶಿಕ್ಷಣ ಪುಸ್ತಕ “ಕ್ಲೀವ್ ಲ್ಯಾಂಡ್ ಹಾಲ್ ಆಫ್ ಫೇಮ್’ ಇದರ ಪ್ರಧಾನ ಸಂಪಾದಕರಾಗಿ, ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಮತ್ತು ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಇದರ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.