ಹೊಸದಿಲ್ಲಿ : ನಾಳೆ ಗುರುವಾರದಿಂದ ಬ್ರಿಟನ್‌ನಲ್ಲಿ ಆರಂಭವಾಗುವ ಐಸಿಸಿ ಕ್ರಿಕೆಟ್ ವಿಶ್ವ ಕಪ್ 2019ರ ಪಂದ್ಯಾವಳಿಗೆ ಬ್ರಿಟನ್‌ಗೆ ವಿಶ್ವದಲ್ಲೇ ಅತ್ಯಧಿಕ ಫ್ಲೈಟ್ ಬುಕ್ಕಿಂಗ್ ಭಾರತದಿಂದ ನಡೆದಿದ್ದು ಇದು 17,505ಕ್ಕೂ ಮೀರಿರುವುದಾಗಿ ಗೊತ್ತಾಗಿದೆ.
ಮೇ 21ರ ವರೆಗಿನ ಅಂಕಿ ಅಂಶಗಳ ಪ್ರಕಾರ ಜಾಗತಿಕ ವಿತರಣ ವ್ಯವಸ್ಥೆಯ (ಜಿಡಿಎಸ್) ಮೂಲಕ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಯ ಅವಧಿಯಲ್ಲಿ, ಆಚೆ-ಈಚೆಯ + ಎರಡು ದಿನ ಸೇರಿದಂತೆ, ಬ್ರಿಟನ್‌ಗೆ
47,939ಕ್ಕೂ ಮೀರಿ ಫ್ಲೈಟ್ ಬುಕ್ಕಿಂಗ್ ನಡೆದಿದ್ದು ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.3ರಷ್ಟು ಹೆಚ್ಚಿರುವುದು ಕಂಡು ಬಂದಿದೆ.
ಈ ವಿಷಯವನ್ನು ಟ್ರಾವೆಲ್ ಪೋರ್ಟ್ ಎಂಬ ವಾಣಿಜ್ಯ ಪ್ರಯಾಣ ವೇದಿಕೆಯು ತನ್ನ ವಿಶ್ಲೇಷಣೆ ಮೂಲಕ ಬಹಿರಂಗಪಡಿಸಿದೆ.
ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಜುಲೈ 14ಕ್ಕೆ ಮುಗಿಯಲಿದೆ. ಅಂತೆಯೇ ಬ್ರಿಟನ್‌ಗೆ ವಿಶ್ವದಲ್ಲೇ ಅತೀ ಹೆಚ್ಚು ಫ್ಲೈಟ್ ಬುಕ್ಕಿಂಗ್ ನಡೆದಿರುವುದು ಭಾರತದಿಂದ (17,505ಕ್ಕೂ ಹೆಚ್ಚು). ಆ ಬಳಿಕದಲ್ಲಿ ದಕ್ಷಿಣ ಆಫ್ರಿಕ (2,654), ಬಾಂಗ್ಲಾದೇಶ (1,565) ಮತ್ತು ಪಾಕಿಸ್ಥಾನ (1,449) ದೇಶಗಳಿವೆ ಎಂದು ತಿಳಿದು ಬಂದಿದೆ.