Advertisement

2026ರಲ್ಲಿ ಭಾರತ ವಿಶ್ವದಲ್ಲೇ ಅತೀ ಹೆಚ್ಚು ಹಾಲು ಉತ್ಪಾದಿಸುವ ದೇಶ

12:16 PM Jul 11, 2017 | Team Udayavani |

ವಿಶ್ವಸಂಸ್ಥೆ : ಅತ್ಯಧಿಕ ಜನಸಂಖ್ಯೆಯನ್ನು ಹೊಂದಿರುವ ಭಾರತ, 2026ರ ವೇಳೆಗೆ ವಿಶ್ವದಲ್ಲೇ ಅತೀ ಹೆಚ್ಚು ಹಾಲು ಉತ್ಪಾದಿಸುವ ದೇಶವಾಗಿ ಮೂಡಿ ಬರಲಿದೆ. ಹಾಗೆಯೇ ವಿಶ್ವದಲ್ಲಿ  ಗರಿಷ್ಠ ಗೋಧಿ ಉತ್ಪಾದಿಸುವ ದೇಶವೆಂಬ ಹೆಗ್ಗಳಿಕೆಯನ್ನೂ ಪಡೆಯಲಿದೆ ಎಂದು ವಿಶ್ವಸಂಸ್ಥೆ ಮತ್ತು ಒಇಸಿಡಿ ವರದಿ ತಿಳಿಸಿದೆ. 

Advertisement

ಮುಂದಿನ ದಶಕ ಮುಗಿಯುವುದರೊಳಗೆ ವಿಶ್ವದ ಜನಸಂಖ್ಯೆಯು ಈಗಿನ 7.3 ಬಿಲಿಯದಿಂದ 8.2 ಬಿಲಿಯ (ಶತಕೋಟಿ) ಪ್ರಮಾಣಕ್ಕೆ ಏರಲಿದೆ. ಆ ವೇಳೆಗೆ ವಿಶ್ವದ ಒಟ್ಟು ಜನಸಂಖ್ಯೆಯ ಶೇ.56ರಷ್ಟು ಜನರು ಭಾರತ ಮತ್ತು ಉಪ-ಸಹಾರಾ-ಆಫ್ರಿಕ ವಲಯದಲ್ಲಿ ಇರುತ್ತಾರೆ ಎಂದು ಓಇಸಿಡಿ-ಎಫ್ಎಓ ಸಿದ್ಧಪಡಿಸಿರುವ 2017-2026ರ ಕೃಷಿ ಮುನ್ನೋಟ ವರದಿ ಹೇಳಿದೆ. 

ಭಾರತದ ಜನಸಂಖ್ಯೆ ಮುಂದಿನ ದಶಕದಲ್ಲಿ 1.3 ಬಿಲಿಯದಿಂದ 1.5 ಬಿಲಿಯಕ್ಕೆ ಏರಲಿದೆ; ಎಂದರೆ ಭಾರತದ ಜನಸಂಖ್ಯೆ ಮುಂದಿನ ಹತ್ತು ವರ್ಷಗಳಲ್ಲಿ 15 ಕೋಟಿ ಹೆಚ್ಚಲಿದೆ. ಆ ಮೂಲಕ ಭಾರತವು ಜನಸಂಖ್ಯೆಯ ಮಟ್ಟಿಗೆ ಚೀನವನ್ನು ಹಿಂದಿಕ್ಕಿ ವಿಶ್ವದ ಬೃಹತ್‌ ಜನಸಂಖ್ಯೆ ಹೊಂದಿರುವ ದೇಶವೆಂಬ ಹೆಗ್ಗಳಿಕೆ ಪಡೆಯಲಿದೆ ಎಂದು ವರದಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next