Advertisement

450 ಕಿ.ಮೀ. ದೂರ ವ್ಯಾಪ್ತಿಯ ಬ್ರಹ್ಮೋಸ್‌ ಕ್ಷಿಪಣಿ ಯಶಸ್ವೀ ಪರೀಕ್ಷೆ

05:37 PM Mar 11, 2017 | udayavani editorial |

ಹೊಸದಿಲ್ಲಿ : ಭಾರತ ಇಂದು ಶನಿವಾರ 450 ಕಿ.ಮೀ. ದೂರ ವ್ಯಾಪ್ತಿಯ ಬ್ರಹ್ಮೋಸ್‌ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಉಡಾವಣೆಯನ್ನು ಅಧಿಕಾರಿಗಳು “ಟೆಕ್ಸ್ಟ್  ಬುಕ್‌ ಲಾಂಚ್‌’ ಎಂದು ಕರೆದಿದ್ದಾರೆ.

Advertisement

ಇಂದು ಶನಿವಾರ ಬೆಳಗ್ಗೆ 11.30ರ ಹೊತ್ತಿಗೆ ಒಡಿಶಾ ದೂರ ಕರಾವಳಿಯಲ್ಲಿನ ಸಂಯುಕ್ತ ಪರೀಕ್ಷಾ ವಲಯದಿಂದ ಸೂಪರ್‌ಸೋನಿಕ್‌ ಕ್ರೂಯಿಸ್‌ ಬ್ರಹ್ಮೋಸ್‌ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಯಿತು. 

ಈಗಿನ ಬ್ರಹ್ಮೋಸ್‌ ಕ್ಷಿಪಣಿಯ ದೂರ ವ್ಯಾಪ್ತಿಯು 290 ಕಿ.ಮೀ.ನದ್ದಾಗಿದೆ. ಇಂದು ಪರೀಕ್ಷಾರ್ಥವಾಗಿ ಉಡಾಯಿಸಲಾಗಿರುವ 450 ಕಿ.ಮೀ. ದೂರ ವ್ಯಾಪ್ತಿಯ ಕ್ಷಿಪಣಿಯ ಪರೀಕ್ಷೆಯು ಇತಿಹಾಸದಲ್ಲೇ ಮೊದಲನೇಯದ್ದಾಗಿದೆ; ಇದರಿಂದ ಅತ್ಯಂತ ದೂರದಿಂದಲೇ ಶತ್ರು  ಗುರಿಯನ್ನು ಕರಾರುವಾಕ್‌ ಆಗಿ ಭೇದಿಸುವುದು ಸಾಧ್ಯವಾಗಲಿದೆ ಎಂದು ಬ್ರಹ್ಮೋಸ್‌ ಏರೋಸ್ಪೇಸ್‌ ಹೇಳಿಕೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next