Advertisement

ನಮ್ಮ ವಿಷಯದಲ್ಲಿ ಮೂಗು ತೂರಿಸಬೇಡಿ;ಇಸ್ಲಾಮಿಕ್ ದೇಶಗಳಿಗೆ ಭಾರತ

11:32 AM Sep 16, 2017 | Sharanya Alva |

ನ್ಯೂಯಾರ್ಕ್: ದೇಶದ ಆಂತರಿಕ ವಿಷಯದಲ್ಲಿ ಮೂಗುತೂರಿಸೋದು ಬೇಡ. ನಮ್ಮ ವಿಷಯದಲ್ಲಿ ಪ್ರತಿಕ್ರಿಯಿಸದಿರುವುದೇ ಉತ್ತಮ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಇಸ್ಲಾಮಿಕ್ ರಾಷ್ಟ್ರಗಳಿಗೆ ಸಲಹೆ ನೀಡಿರುವುದಾಗಿ ಎಎನ್ಐ ವರದಿ ಮಾಡಿದೆ.

Advertisement

ಕಾಶ್ಮೀರದ ಕುರಿತು ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಎತ್ತಿದ ಪ್ರಶ್ನೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇದು ಭಾರತಕ್ಕೆ ಸಂಬಂಧಪಟ್ಟ ವಿಷಯ, ಇದರಲ್ಲಿ ಬೇರೆ ಯಾರೂ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂಬ ಖಡಕ್ ಸಂದೇಶ ರವಾನಿಸಿತ್ತು. ತಾನು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯ ಪರವಾಗಿ ಮಾತನಾಡಿರುವುದಾಗಿ ಹೇಳಿರುವ ಪಾಕ್ ಹೇಳಿಕೆಯನ್ನು ಭಾರತ ತಳ್ಳಿಹಾಕಿದೆ.

ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಶನ್(ಐಒಸಿ) ಭಾರತದ ಆಂತರಿಕ ವಿಷಯದಲ್ಲಿ ಅಭಿಪ್ರಾಯವ್ಯಕ್ತಪಡಿಸೋದು ಬೇಡ. ಆ ನಿಟ್ಟಿನಲ್ಲಿ ಭವಿಷ್ಯದಲ್ಲಿಯೂ ಕೂಡ ಇಂತಹ ಹೇಳಿಕೆಯನ್ನು ಕೊಡುವ ಅಗತ್ಯವಿಲ್ಲ ಎಂಬುದಾಗಿ ನಾವು(ಭಾರತ) ಐಒಸಿಗೆ ಕಠಿಣ ಸಂದೇಶ ರವಾನಿಸುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next