Advertisement

ಆಸೀಸ್‌ ಕ್ರಿಕೆಟ್‌ ಪ್ರವಾಸಕ್ಕೆ ಭಾರತ ತಂಡ ಸಿದ್ಧ: ಆದರೆ ಷರತ್ತು ಅನ್ವಯ

03:18 PM May 09, 2020 | keerthan |

ನವದೆಹಲಿ: ಆಸ್ಟ್ರೇಲಿಯದಲ್ಲಿ ಭಾರತ ಟೆಸ್ಟ್‌ ಪಂದ್ಯವನ್ನಾಡಲು ನಿರ್ಧರಿಸಿದೆ. ಸ್ವತಃ ಈ ಮಾತನ್ನು ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಖಜಾಂಚಿ ಅರುಣ್‌ ಧುಮಾಲ್‌ ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Advertisement

ಆಸ್ಟ್ರೇಲಿಯ ವಿರುದ್ಧ ಟೆಸ್ಟ್‌ ಆಡುವ ಮೊದಲು ಭಾರತ ಆಟಗಾರರು ಎರಡು ವಾರಗಳ ಕಡ್ಡಾಯ ಪ್ರತ್ಯೇಕವಾಸಕ್ಕೆ ಒಳಗಾಗಬೇಕು, ಇದಕ್ಕೆ ಆಸೀಸ್‌ನ ಐಷಾರಾಮಿ ಹೋಟೆಲ್‌ನಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯ ಮೊದಲೇ ತಿಳಿಸಿತ್ತು.

ಆದರೆ ಆಸೀಸ್‌ನಲ್ಲಿ ಟೆಸ್ಟ್‌ ಆಡುವ ಪ್ರಸ್ತಾವನೆಯನ್ನು ಭಾರತ ಒಪ್ಪಿಕೊಳ್ಳುವುದು ಅನುಮಾನ ಎನ್ನಲಾಗಿತ್ತು. ಇದರಿಂದ ಕ್ರಿಕೆಟ್‌ ಆಸ್ಟ್ರೇಲಿಯ ಕೋಟ್ಯಂತರ ನಷ್ಟಕ್ಕೆ ತುತ್ತಾಗುವ ಆತಂಕ ವ್ಯಕ್ತಪಡಿಸಿತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಧುಮಾಲ್‌, “ಬೇರೆ ದಾರಿಯೇ ಇಲ್ಲ, ಕ್ರಿಕೆಟ್‌ ಅನ್ನು ಮತ್ತೆ ಆರಂಭಿಸಲು ಪ್ರತಿಯೊಬ್ಬ ಕ್ರಿಕೆಟಿಗನೂ 2 ವಾರ ದಿಗ್ಬಂಧನಕ್ಕೆ ಒಳಗಾಗಲೇ ಬೇಕಾಗಿದೆ, ಇಷ್ಟು ದಿನ ದಿಗ್ಬಂಧನಕ್ಕೆ ಒಳಗಾದ ನಮಗೆ 2 ವಾರ ತೀರಾ ದೊಡ್ಡದೇನೂ ಅಲ್ಲ’ ಎಂದಿದ್ದಾರೆ, ಬಿಸಿಸಿಐ ಈ ಹೇಳಿಕೆಯಿಂದ ಕ್ರಿಕೆಟ್‌ ಆಸ್ಟ್ರೇಲಿಯ ನೆಮ್ಮದಿಯ ನಿಟ್ಟುಸಿರುಬಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next