Advertisement

UNO: ವಿಶ್ವಸಂಸ್ಥೆಯಲ್ಲಿ ಪಾಕ್‌ ನಿರ್ಣಯಕ್ಕೆ ಭಾರತ ಬೆಂಬಲ!

10:02 PM Jul 12, 2023 | Team Udayavani |

ನ್ಯೂಯಾರ್ಕ್‌: ಸ್ವೀಡನ್‌ನಲ್ಲಿ ಕುರಾನ್‌ ಸುಟ್ಟಿರುವುದನ್ನು ಖಂಡಿಸಿ, 57 ಮುಸ್ಲಿಂ ರಾಷ್ಟ್ರಗಳ ಪರವಾಗಿ ಪಾಕಿಸ್ತಾನವು ವಿಶ್ವಸಂಸ್ಥೆಯಲ್ಲಿ ಮಂಡಿಸಿರುವ ನಿರ್ಣಯವನ್ನು ಭಾರತ ಬೆಂಬಲಿಸಿದೆ.

Advertisement

ಸದಾ ಭಾರತಕ್ಕೆ ಅಹಿತವನ್ನೇ ಉಂಟು ಮಾಡುವ ಪಾಕಿಸ್ತಾನವನ್ನು ಅಪರೂಪದ ಸಂದರ್ಭದಲ್ಲಿ ಭಾರತ ಬೆಂಬಲಿಸಿದೆ. ಧಾರ್ಮಿಕ ದ್ವೇಷದ ವಿರುದ್ಧ ಮಂಡಿಸಿರುವ ನಿರ್ಣಯಕ್ಕೆ ಬುಧವಾರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಅನುಮೋದನೆ ನೀಡಿದೆ. ಈ ನಿರ್ಣಯದ ಪರವಾಗಿ ಭಾರತ, ಚೀನಾ, ಅರ್ಜೆಂಟೀನ, ಕ್ಯೂಬಾ, ದಕ್ಷಿಣ ಆಫ್ರಿಕಾ, ಉಕ್ರೇನ್‌ ಮತ್ತು ವಿಯೆಟ್ನಾಂ ಮತ ಹಾಕಿವೆ.

ವಿಶೇಷವೆಂದರೆ ಈ ನಿರ್ಣಯದ ವಿರುದ್ಧ ಅಮೆರಿಕ ಮತ ಚಲಾಯಿಸಿದೆ. ಧಾರ್ಮಿಕ ಹಕ್ಕುಗಳ ತನ್ನ ನಿಲುವೇ ಬೇರೆ ಎಂದು ಅದು ಹೇಳಿದೆ. ಕಳೆದ ತಿಂಗಳು ಸ್ವೀಡನ್‌ನ ಸ್ಟಾಕ್‌ಹೋಮ್‌ನ ಮುಖ್ಯ ಮಸೀದಿ ಹೊರಗೆ ಇರಾಖೀ ನಿರಾಶ್ರಿತನೊಬ್ಬ ಮುಸ್ಲಿಮರ ಪವಿತ್ರ ಗ್ರಂಥ “ಕುರಾನ್‌’ ಸುಟ್ಟು ಹಾಕಿದ್ದಾನೆ. ಈ ಘಟನೆಯನ್ನು ಪ್ರಪಂಚದಾದ್ಯಂತ ಇರುವ ಮುಸ್ಲಿಂ ರಾಷ್ಟ್ರಗಳು ಖಂಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next