Advertisement
ಸುದ್ದಿಗಾರರೊಂದಿಗೆ ಮಾತನಾಡಿ ”ನಮ್ಮ ನೀತಿಯು ದೀರ್ಘಕಾಲದಿಂದ ಸ್ಥಿರವಾಗಿದೆ. ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ಪ್ಯಾಲೆಸ್ತೀನ್ ರಾಷ್ಟ್ರವನ್ನು ಸ್ಥಾಪಿಸುವ ಕಡೆಗೆ ನೇರ ಮಾತುಕತೆಗಳನ್ನು ಪುನರಾರಂಭಿಸುವುದನ್ನು ಭಾರತ ಯಾವಾಗಲೂ ಪ್ರತಿಪಾದಿಸುತ್ತದೆ, ಸುರಕ್ಷಿತ ಮತ್ತು ಮಾನ್ಯತೆ ಪಡೆದ ಗಡಿಗಳಲ್ಲಿ, ಇಸ್ರೇಲ್ ನೊಂದಿಗೆ ಶಾಂತಿಯಿಂದ ಅಕ್ಕಪಕ್ಕದಲ್ಲಿರುತ್ತದೆ. ಆ ಸ್ಥಾನವು ಹಾಗೆಯೇ ಉಳಿಯುತ್ತದೆ ಎಂದು ನಾನು ಭಾವಿಸುತ್ತೇನೆ”ಎಂದು ಹೇಳಿದ್ದಾರೆ.
Related Articles
Advertisement
ಇಸ್ರೇಲ್‌ನಲ್ಲಿ ಸುಮಾರು 18,000 ಭಾರತೀಯರಿದ್ದು, ನಮ್ಮ ಪ್ರಜೆಯೊಬ್ಬರು ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರು ಆಸ್ಪತ್ರೆಯಲ್ಲಿದ್ದು ಸುಧಾರಿಸುತ್ತಿದ್ದಾರೆ. ತೀವ್ರ ಸಂಘರ್ಷ ಪೀಡಿತ ಗಾಜಾದಲ್ಲಿ ನಾಲ್ವರು ಮತ್ತು ವೆಸ್ಟ್ ಬ್ಯಾಂಕ್ ನಲ್ಲಿ 12 ಮಂದಿ ಭಾರತೀಯರಿದ್ದಾರೆ” ಎಂದು ತಿಳಿಸಿದರು.
ಇಸ್ರೇಲ್‌ನಿಂದ ಭಾರತಕ್ಕೆ ಬರುವ ವಿಮಾನದಲ್ಲಿ 230 ಭಾರತೀಯರು ಬರುತ್ತಿದ್ದಾರೆ. ಭಾರತೀಯರನ್ನು ರಕ್ಷಿಸಲು ಭಾರತ ಸರಕಾರ ಪ್ರಯತ್ನಗಳನ್ನು ನಡೆಸುತ್ತಿದ್ದು ‘ಆಪರೇಷನ್ ಅಜಯ್’ ಭಾಗವಾಗಿ ಭಾರತೀಯರನ್ನು ವಾಪಸ್ ಕರೆತರಲಾಗುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಬುಧವಾರ ಘೋಷಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಎರಡು ಬಾರಿ ಮಾತನಾಡಿದ್ದಾರೆ, ಎರಡೂ ಬಾರಿ ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿರುವ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. ಸೋಮವಾರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದ ಬಗ್ಗೆ ವಿವರಿಸಿದ್ದರು. ಈ ವೇಳೆ ಪ್ರಧಾನಿ ಮೋದಿ ಅವರು ಇಸ್ರೇಲ್ ಗೆ ಬೆಂಬಲವನ್ನು ವ್ಯಕ್ತಪಡಿಸಿದ್ದರು.
ಭಾರತ-ಕೆನಡಾ ರಾಜತಾಂತ್ರಿಕ ಸಮಸ್ಯೆಯ ಕುರಿತು ಪ್ರತಿಕ್ರಿಯಿಸಿ ‘ನಮ್ಮ ರಾಜತಾಂತ್ರಿಕ ಉಪಸ್ಥಿತಿಯಲ್ಲಿ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ನಾವು ವಿವಿಧ ಹಂತಗಳಲ್ಲಿ ಕೆನಡಾದೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದರು.