Advertisement

“ಫುಟ್ ವಾಲಿ’ಆಡಿ ಅಭ್ಯಾಸ ಆರಂಭಿಸಿದ ಭಾರತ

10:56 PM Dec 18, 2021 | Team Udayavani |

ಸೆಂಚುರಿಯನ್‌: ದಕ್ಷಿಣ ಆಫ್ರಿಕಾದಲ್ಲಿ ಒಂದು ದಿನದ ಐಸೊಲೇಶನ್‌ ಪೂರೈಸಿದ ಟೀಮ್‌ ಇಂಡಿಯಾ ಕ್ರಿಕೆಟಿಗರು ಶನಿವಾರ ಮೊದಲ ಹಂತದ ಅಭ್ಯಾಸ ನಡೆಸಿದರು.

Advertisement

ಹೊರಾಂಗಣದಲ್ಲಿ ಫುಟ್ ವಾಲಿ ಆಡಿ ಗಮನ ಸೆಳೆದರು. ಬಿಸಿಸಿಐ ಇದರ ವೀಡಿಯೋ ಒಂದನ್ನು ಬಿಡುಗಡೆ ಮಾಡಿದೆ.

“ಭಾರತ ತಂಡದ ಆಟಗಾರರ ಮುಂದೆ ನಾವು ಬಹಳಷ್ಟು ಕ್ರೀಡೆಗಳ ಆಯ್ಕೆ ನೀಡಿದ್ದೆವು. ಅವರು ಫುಟ್ ವಾಲಿಯನ್ನೇ ಆಯ್ದುಕೊಂಡರು. ಇದು ಈಗ ಇಂಡಿಯಾ ಕ್ರಿಕೆಟ್‌ ಟೀಮ್‌ ಗೇಮ್‌ ಎಂದೇ ಕರೆಯಲ್ಪಡುತ್ತಿದೆ’ ಎಂದು ಭಾರತ ತಂಡದ ಸ್ಟ್ರೆಂತ್‌ ಆ್ಯಂಡ್‌ ಕಂಡೀಷನಿಂಗ್‌ ಕೋಚ್‌ ಸೋಹಮ್‌ ದೇಸಾಯಿ ಹೇಳಿದರು.

“ನಾವಿಲ್ಲಿ ಸಮುದ್ರ ಮಟ್ಟಕ್ಕಿಂತ ಬಹಳಷ್ಟು ಎತ್ತರದಲ್ಲಿದ್ದೇವೆ. ಹೀಗಾಗಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು 2-3 ದಿನ ಬೇಕಾಗುತ್ತದೆ’ ಎಂದರು.

ಪ್ರತ್ಯೇಕ ರೆಸಾರ್ಟ್‌ ವ್ಯವಸ್ಥೆ
ಮುಂಬಯಿಯಲ್ಲಿ 3 ದಿನಗಳ ಕಠಿನ ಕ್ವಾರಂಟೈನ್‌ಗೆ ಒಳಗಾದ ಬಳಿಕ ಭಾರತ ತಂಡ 10 ಗಂಟೆಗಳ ಸುದೀರ್ಘ‌ ಪ್ರಯಾಣ ನಡೆಸಿ ಜೊಹಾನ್ಸ್‌ಬರ್ಗ್‌ಗೆ ಬಂದಿಳಿದಿತ್ತು. ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್‌ ಕಾಟ ಇರುವುದರಿಂದ ಅತ್ಯುತ್ತಮ ಹಾಗೂ ಅತ್ಯಂತ ಕಠಿನವೆನಿಸಿದ ಜೈವಿಕ ಸುರಕ್ಷತೆಯನ್ನು ಹೊಂದಿರುವ ಪ್ರತ್ಯೇಕ ರೆಸಾರ್ಟ್‌ ಒಂದನ್ನು ಟೀಮ್‌ ಇಂಡಿಯಾಕ್ಕೆ ವ್ಯವಸ್ಥೆ ಮಾಡಲಾಗಿದೆ.

Advertisement

ಡಿ. 26ರಂದು ಸೆಂಚುರಿಯನ್‌ನಲ್ಲೇ ಮೊದಲ ಟೆಸ್ಟ್‌ ಪಂದ್ಯ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next