Advertisement

ವಿಶ್ವಸಂಸ್ಥೆಯಲ್ಲಿ ಪದೇ, ಪದೇ ಯಾಕೆ ಪ್ರಸ್ತಾಪಿಸ್ತೀರಿ? ಚೀನಾಕ್ಕೆ ಭಾರತ ಖಡಕ್ ತಿರುಗೇಟು

03:38 PM Apr 10, 2020 | Nagendra Trasi |

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಕಾಶ್ಮೀರದ ವಿಚಾರದ ಬಗ್ಗೆ ಚೀನಾ ಮತ್ತೆ ಧ್ವನಿ ಎತ್ತಿದೆ. ಆದರೆ ಚೀನಾದ
ವಾದವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರಸ್ಕರಿಸಿದ್ದು, ಜಮ್ಮು-ಕಾಶ್ಮೀರ ಭಾರತದ ಆಂತರಿಕ ವಿಚಾರ
ಎಂದು ಮತ್ತೊಮ್ಮೆ ತಿರುಗೇಟು ನೀಡಿದೆ.

Advertisement

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ
ಸದಸ್ಯತ್ವ ಹೊಂದಿರುವ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ವಕ್ತಾರ ವಿಶ್ವಸಂಸ್ಥೆಯಲ್ಲಿ ಜಮ್ಮು-ಕಾಶ್ಮೀರದ ಬಗ್ಗೆ ಎತ್ತಿರುವ ಪ್ರಸ್ತಾಪವನ್ನು
ನಾವು ತಿರಸ್ಕರಿಸುತ್ತೇವೆ. ಈ ವಿಚಾರದಲ್ಲಿ ಭಾರತ ಹೊಂದಿರುವ ನಿಲುವಿನ ಬಗ್ಗೆ ಚೀನಾಕ್ಕೆ ಅರಿವಿದೆ. ಜಮ್ಮು-ಕಾಶ್ಮೀರ
ಕೇಂದ್ರಾಡಳಿತ ಪ್ರದೇಶವಾಗಿದೆ, ಅಲ್ಲದೇ ಇದು ಭಾರತದ ಆಂತರಿಕ ಭಾಗವಾಗಿ ಮುಂದುವರಿಯಲಿದೆ. ಜಮ್ಮು-ಕಾಶ್ಮೀರಕ್ಕೆ
ಸಂಬಂಧಿಸಿದ ಯಾವುದೇ ಸಮಸ್ಯೆ ಭಾರತದ ಆಂತರಿಕ ವಿಚಾರವಾಗಿದೆ ಎಂದು ತಿಳಿಸಿದೆ.

ಗಡಿ ಭಯೋತ್ಪಾದನೆಯನ್ನು ಗುರುತಿಸಿ ಚೀನಾ ಖಂಡಿಸಿಬೇಕಾಗಿದೆ. ಗಡಿ ಭಯೋತ್ಪಾದನೆಯಿಂದ ಜಮ್ಮು ಕಾಶ್ಮೀರ ಸೇರಿದಂತೆ
ಭಾರತದಲ್ಲಿ ನೆಲೆಸಿರುವವರಿಗೆ ತೊಂದರೆಯಾಗಲಿದೆ ಎಂದು ವಿವರಿಸಿದೆ.

ಕಾಶ್ಮೀರದ ವಿಚಾರ ವಿಶ್ಚಸಂಸ್ಥೆಯಲ್ಲಿ ಅತೀ ಪ್ರಾಮುಖ್ಯತೆಯ ಚರ್ಚೆಯ ವಿಷಯವಾಗಬೇಕು ಎಂದು ಪಾಕಿಸ್ತಾನ ಮಾರ್ಚ್ 10ರಂದು
ಬರೆದಿರುವ ಪತ್ರದಲ್ಲಿ ತಿಳಿಸಿರುವುದಾಗಿ ಚೀನಾ ಹೇಳಿರುವುದಾಗಿ ವರದಿಯಾಗಿದೆ. ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತದ
ನಿಲುವು ಅಚಲವಾಗಿದೆ. ವಿಶ್ವಸಂಸ್ಥೆಯಲ್ಲಿ ಪದೇ, ಪದೇ ಈ ವಿಷಯ ಪ್ರಸ್ತಾಪಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು
ಭಾರತ ತಿರುಗೇಟು ನೀಡಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next