Advertisement

ದ್ವಿಪಕ್ಷೀಯ ಸಹಕಾರ: 8 ಒಪ್ಪಂದಗಳಿಗೆ ಭಾರತ –ಮಾನ್ಮಾರ್‌ ಸಹಿ

12:27 PM Sep 06, 2017 | udayavani editorial |

ನೇ ಪೀ ತಾವ್‌ : ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದ ಸುಮಾರು ಎಂಟು ಒಪ್ಪಂದಗಳಿಗೆ ಭಾರತ ಮತ್ತು ಮ್ಯಾನ್ಮಾರ್‌ ಇಂದು ಸಹಿ ಹಾಕಿವೆ. 

Advertisement

ಮ್ಯಾನ್ಮಾರ್‌ ಜತೆಗೆ ಬಹು ಆಯಾಮಗಳ ಪಾಲುದಾರಿಕೆಯನ್ನು ಹೊಂದುವುದರೊಂದಿಗೆ ಅಲ್ಲಿನ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಬಲಪಡಿಸುವುದು ಈ ಒಪ್ಪಂದಗಳ ಉದ್ದೇಶವಾಗಿದೆ. 

ಪ್ರಧಾನಿ ಮೋದಿ ಮತ್ತು ಮ್ಯಾನ್ಮಾರ್‌ನ ಸ್ಟೇಟ್‌ ಕೌನ್ಸೆಲರ್‌ ಆಂಗ್‌ ಸಾನ್‌ ಸೂಕಿ ಅವರು ಹಲವಾರು ದ್ವಿಪಕ್ಷೀಯ ವಿಷಯಗಳಿಗೆ ಸಂಬಂಧಿಸಿ ಮಾತುಕತೆ ನಡೆಸಿದ ಬಳಿಕ ಉಭಯ ನಾಯಕರು ಪರಸ್ಪರ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿದರು. 

ಉಭಯ ದೇಶಗಳ ಚುನಾವಣಾ ಆಯೋಗಗಳ ನಡುವೆ ಉತ್ತಮ ಸಂಪರ್ಕ, ಸಂವಹನ, ಸಹಕಾರ ಕಲ್ಪಿಸುವ ಒಪ್ಪಂದವು ಎಂಟು ಒಪ್ಪಂದಗಳಲ್ಲಿ ಒಂದಾಗಿದೆ. 2017-2020ರ ಅವಧಿಯಲ್ಲಿ ಉಭಯ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯಕ್ಕೆ ಅವಕಾಶ ಕಲ್ಪಿಸುವ ಒಪ್ಪಂದ ಕೂಡ ಮಹತ್ವದ್ದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next