Advertisement
ಬೆಂಗಳೂರಿನ ಸಾಯಿ ಸ್ಪೋರ್ಟ್ ಸೆಂಟರ್ ನಲ್ಲಿ 330 ಹಾಸಿಗೆಯ ಕ್ರೀಡಾ ವಸತಿ ನಿಲಯ ಮತ್ತು ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು.
Related Articles
Advertisement
ಕಳೆದ ಎರಡು ಏಷ್ಯನ್ ಗೇಮ್ಸ್ ನಲ್ಲಿ ಕಬ್ಬಡ್ಡಿಯಲ್ಲಿ ಭಾರತ ಬಂಗಾರ ಪದಕ ಗೆದ್ದಿಲ್ಲ. ಈ ಬಾರಿ ಬಂಗಾರದ ಪದಕ ಗೆಲ್ಲಲೇಬೇಕು. ಆ ನಿಟ್ಟಿನಲ್ಲಿ ಶ್ರಮಿಸಿ ಎಂದು ಹೇಳಿದ್ದೇನೆ. ಕ್ರೀಡಾಪಟುಗಳು ಸದಾ ಖುಷಿಯಿಂದ ಇರಬೇಕು. ಕ್ರೀಡೆಯಲ್ಲಿ ಸೋಲುಗೆಲುವು ಸಹಜ. ಆದರೆ ಜೀವನದಲ್ಲಿ ಎಂದೂ ಕ್ರೀಡಾಪಟುಗಳು ಸೋಲಬಾರದು, ದುಖಿಃತರಾಗಬಾರದು ಎಂದು ಸಚಿವ ಕಿರಣ್ ರಿಜಿಜು ಹೇಳಿದರು.
ಮುಂದಿನ ನಾಲ್ಕು ತಿಂಗಳಲ್ಲಿ ಇನ್ನೂ ಸಾಕಷ್ಟು ಕ್ರೀಡಾಪಟುಗಳು ಟೋಕಿಯೋ ಓಲಂಪಿಕ್ ಗೆ ಅರ್ಹತೆ ಪಡೆಯಲು ಅವಕಾಶ ಇದೆ. ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಿಗೆ ಎಲ್ಲ ವ್ಯವಸ್ಥೆ ನೋಡಿಕೊಳ್ಳಲು ತಾಂತ್ರಿಕ ತಂಡ ಇರತ್ತೆ. ಕ್ರೀಡಾ ಕ್ಷೇತ್ರದಲ್ಲಿ ಭಾರತ ಉತ್ತಮ ಸ್ಥಾನಕ್ಕೆ ತಲುಪಬೇಕು. 2028 ರಲ್ಲಿ ಅಮೇರಿಕಾದ ಲಾಸ್ ಎಂಜಲೀಸ್ ಓಲಂಪಿಕ್ ಕ್ರೀಡಾಕೂಟ ನಡೆಯಲಿದೆ. ಅದಕ್ಕೆ ನಾವು ಸಂಪೂರ್ಣ ಸಿದ್ಧತೆಯನ್ನ ಈಗಿನಿಂದಲೆ ಶುರುಮಾಡಬೇಕು. ಪದಕ ಪಟ್ಟಿಯಲ್ಲಿ ಭಾರತ ಟಾಪ್ 10 ರ ಒಳಗೆ ಇರಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ:ಕರ್ನಾಟಕ ಚಾಂಪಿಯನ್ ಕರ್ನಾಟಕ ಚಾಂಪಿಯನ್
ಇದಕ್ಕು ಮುನ್ನ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡೆ ಸಚಿವ ಡಾ. ನಾರಾಯಣಗೌಡ, ಕೇಂದ್ರ ಕ್ರೀಡಾ ಸಚಿವರ ಆಗಮನದಿಂದ ನಮಗೆ ಇನ್ನಷ್ಟು ಹುರುಪು ಬಂದಿದೆ. ನಿನ್ನೆಯಷ್ಟೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಒಳಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕೇಂದ್ರ ಸಚಿವರ ಜೊತೆಗೂಡಿ ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚಿನ ನೆರವು ನೀಡುತ್ತೇವೆ. 2022 ರಲ್ಲಿ ಖೇಲೊ ಇಂಡಿಯಾ ಅಂತಾರಾಜ್ಯ ವಿವಿ ಗಳ ಕ್ರೀಡಾಕೂಟ ಇದೆ. ಬೆಂಗಳೂರಿನಲ್ಲಿ ಈ ಕ್ರೀಡಾಕೂಟ ನಡೆಯುತ್ತಿದೆ. ರಾಜ್ಯ ಸರ್ಕಾರ ಅದಕ್ಕೆ ಬೇಕಾದ ಎಲ್ಲ ಸಹಕಾರ ನೀಡಲಿದೆ. ಓಲಂಪಿಕ್ ನಲ್ಲಿ ಕೂಡ ನಮ್ಮ ರಾಜ್ಯದಿಂದ ಸಾಕಷ್ಟು ಕ್ರೀಡಾಪಟುಗಳು ಭಾಗವಹಿಸಿ, ಸಾಧನೆ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. ಒಲಂಪಿಕ್ ಗೆ ಅರ್ಹತೆ ಪಡೆಯಲು ಇನ್ನೂ ನಾಲ್ಕು ತಿಂಗಳು ಸಮಯವಿದ್ದು, ಸಾಕಷ್ಟು ಕ್ರೀಡಾಪಟುಗಳು ಅರ್ಹತೆ ಪಡೆದು, ನಮ್ಮ ರಾಜ್ಯಕ್ಕೆ ದೇಶಕ್ಕೆ ಕೀರ್ತಿ ತರುತ್ತಾರೆ ಎಂಬ ಭರವಸೆ ಇದೆ ಎಂದು ಅವರು ಹೇಳಿದರು.
ಬಿಲಿಯಡ್ಸ್ ವಿಶ್ವ ಚಾಂಪಿಯನ್ ಪಂಕಜ್ ಆಡ್ವಾನಿ, ಸಾಯಿ ಸ್ಪೋರ್ಟ್ಸ್ ನ ಮುಖ್ಯಸ್ಥರು, ಇಲಾಖೆಯ ಅಧಿಕಾರಿಗಳು, ಭಾರತೀಯ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.