Advertisement

India ಇತರರಿಗೆ ಮಾದರಿಯಾಗಿರಬೇಕು: ಉಪರಾಷ್ಟ್ರಪತಿ ಜಗದೀಪ್ ಧನ್ಕರ್

12:05 AM Nov 10, 2023 | Team Udayavani |

ಪಣಜಿ: ಇಂದು ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಮಾನವ ಸಂನ್ಮೂಲ ಸಾಂಸ್ಕøತಿಕವಾಗಿಯೂ ಸೃಜನಶೀಲವಾಗಿರಬೇಕು, ಯಾಂತ್ರೀಕೃತವಾಗಿರಬಾರದು. ನಮ್ಮದು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ನಾವು ಇತರರಿಗೆ ಮಾದರಿಯಾಗಿರಬೇಕು ಎಂದು ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ನುಡಿದರು.

Advertisement

ಗೋವಾದ ಬಾಂಬೋಲಿಂ ಬಳಿಯ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ 37 ನೇಯ ರಾಷ್ಟ್ರೀಯ ಕ್ರೀಡಾ ಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಗೋವಾದಲ್ಲಿ ನಡೆದ ಈ ರಾಷ್ಟ್ರೀಯ ಸ್ಫರ್ಧೆಯಲ್ಲಿ ಭಾಗವಹಿಸಿದ ಎಲ್ಲರೂ ಜಯಶಾಲಿಗಳೇ ಆಗಿದ್ದಾರೆ. ಪ್ರಸಕ್ತ ರಾಷ್ಟ್ರೀಯ ಕ್ರೀಡಾ ಸ್ಫರ್ಧೆಯಲ್ಲಿವಿವಿಧ ಕ್ರೀಡೆಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ವಿವಿಧ ರಾಜ್ಯಗಳ ಹಿಂದಿನ ಕ್ರೀಡೆಯನ್ನು ಇಂತಹ ಸ್ಫರ್ಧೆಯಲ್ಲಿ ಸೇರಿಸಿರುವುದು ಒಂದು ರೀತಿಯ ಸಂಸ್ಕೃತಿಯ ರಕ್ಷಣೆಯೇ ಆಗಿದೆ. ಗೋವಾ ರಾಜ್ಯದ ಜನತೆಯ ಹೃದಯ ತುಂಬಾ ವಿಶಾಲವಾದದ್ದು. ಚಂದ್ರಯಾನ 3 ಯಶಸ್ವಿಯಾದಂತೆಯೇ ಗೋವಾದಲ್ಲಿ ನಡೆದ ಈ ರಾಷ್ಟ್ರೀಯ ಕ್ರೀಡಾ ಸ್ಫರ್ಧೆಯೂ ಯಶಸ್ವಿಯಾಗಿದೆ. ಇದಕ್ಕಾಗಿ ಗೋವಾ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ವೇದಿಕೆಯ ಮೇಲೆ ಉಪಸ್ಥಿತರಿದ್ದ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್ ಮಾತನಾಡಿ, ಇನ್ನು ಮುಂದೆ ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಆಟಗಾರರಿಗೆ ಶೇ.4ರಷ್ಟು ಮೀಸಲಾತಿ ನೀಡಲಾಗುವುದು. ರಾಜ್ಯವು ರಾಷ್ಟ್ರಮಟ್ಟದ ಸ್ಪರ್ಧೆಗಳ ಯಶಸ್ವಿ ಆಯೋಜನೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ ಸೃಷ್ಟಿಸಿದೆ. ಇನ್ನು ಮುಂದೆ ರಾಜ್ಯದ 39 ಕ್ರೀಡಾ ಮೈದಾನಗಳು ಕೆಲವು ಆಟಗಳಿಗೆ ನಾಮನಿರ್ದೇಶನಗೊಳ್ಳಲಿವೆ. ಪ್ರವಾಸೋದ್ಯಮ ರಾಜ್ಯ ಎಂದು ಕರೆಯಲ್ಪಡುವ ಗೋವಾ ರಾಜ್ಯ ಈಗ ಕ್ರೀಡಾ ಸ್ಪರ್ಧೆಗಳಿಗೆ ಹೆಸರುವಾಸಿಯಾಗಲಿವೆ ಎಂದು ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಹೇಳಿದರು.

ಗೋವಾ ರಾಜ್ಯದ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ, ಕೇಂದ್ರ ಸಚಿವ ಶ್ರೀಪಾದ ನಾಯ್ಕ, ಗೋವಾ ರಾಜ್ಯ ಕ್ರೀಡಾ ಸಚಿವ ಗೋವಿಂದ ಗಾವಡೆ, ಪಿ.ಟಿ.ಉಷಾ ಮತ್ತಿತರರು ಉಪಸ್ಥಿತರಿದ್ದರು. ಸ್ಫರ್ಧಾ ವಿತೇತ ಕ್ರೀಡಾ ಪಟುಗಳಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಅಕ್ಟೋಬರ್ 26 ರಂದು ಪ್ರಧಾನಿ ನರೇಂದ್ರ ಮೋದಿಯವರು ಗೋವಾದಲ್ಲಿ ಆಯೋಜಿಸಿದ್ದ 37 ನೇಯ ರಾಷ್ಟ್ರೀಯ ಕ್ರೀಡಾ ಸ್ಫರ್ಧೆಯ ಉಧ್ಘಾಟನೆ ನೆರವೇರಿಸಿದ್ದರು. ನೊವೆಂಬರ್ 9 ರಂದು ಈ ರಾಷ್ಟ್ರೀಯ ಕ್ರೀಡಾ ಸ್ಫರ್ಧೆ ಈ ಮೂಲಕ ಸಮಾರೋಪಗೊಂಡಿದೆ.

ವಾಮನ ವೃಕ್ಷ ಕಲಾ ಎಂಬ ದ್ವಿಶತಮಾನೋತ್ಸವ ಪುಸ್ತಕ ಬಿಡುಗಡೆ
ಡ್ವಾರ್ಫ್ ಟ್ರೀ ಆರ್ಟ್ ಎಂದು ಕರೆಯಲ್ಪಡುವ ಬೋನ್ಸಾಯ್ ಬೇರೆ ಯಾವುದೇ ದೇಶದಿಂದ ಬಂದಿಲ್ಲ, ಇದು 5,000 ವರ್ಷಗಳ ಹಿಂದೆ ಭಾರತದಲ್ಲಿ ಪ್ರಾರಂಭವಾಯಿತು. ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರು ವಾಮನ ವೃಕ್ಷ ಕಲಾ ಪುಸ್ತಕದ ಬಗ್ಗೆ ಪುರಾವೆ ಸಹಿತ ವಿವರವಾದ ಮಾಹಿತಿ ನೀಡಿದ್ದಾರೆ. ಈ ಕುಬ್ಜ ಮರದ ಕಲೆ ಭಾರತದಲ್ಲಿ ಹುಟ್ಟಿಕೊಂಡಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ನುಡಿದರು.

Advertisement

ಗೋವಾ ರಾಜಭವನದಲ್ಲಿ ರಾಜಭವನದ ದರ್ಬಾರ್‍ನಲ್ಲಿ ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರ ವಾಮನ ವೃಕ್ಷ ಕಲಾ ಎಂಬ ದ್ವಿಶತಮಾನೋತ್ಸವ ಪುಸ್ತಕವನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್, ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಸಾಹಿತಿ ದಾಮೋದರ ಮಾವಜೊ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next