Advertisement

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

10:29 PM May 02, 2024 | Vishnudas Patil |

ವಿಜಯಪುರ : ದೇಶದಲ್ಲಿ 50 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಭ್ರಷ್ಟಾಚಾರಗಳಲ್ಲೇ ಮುಳುಗಿದ್ದ ಪರಿಣಾಮ ಈಗಲೂ ಬಡತನದ ಕುರಿತು ಮಾತನಾಡುವ ದುಸ್ಥಿತಿ ತಂದಿದೆ. ಅಭಿವೃದ್ಧಿ ಪರ ಆಡಳಿತಗಾರ ಮೋದಿ ಅವರಿಂದಾಗಿ‌ಕೇವಲ 10 ವರ್ಷದಲ್ಲಿ ಭಾರತ ವಿಶ್ವ ಮಟ್ಟದಲ್ಲಿ ಮಿಂಚುವಂತಾಗಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ನಗರದ ಬಿಜೆಪಿ ಹಮ್ಮಿಕೊಂಡಿದ್ದ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಆಡಳಿತದ ಕೇವಲ ಒಂದು ದಶಕದಲ್ಲಿ ಮಹಿಳೆಯರಿಗೆ ರಾಜಕೀಯದಲ್ಲಿ ಶೇ.33 ರಷ್ಟು ಮೀಸಲಾತಿ ನೀಡಿದ್ದು, ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಆದ್ಯತೆ, ಮನೆಗಳ ನಿರ್ಮಾಣದಲ್ಲಿ ಶೇ.37 ರಷ್ಟನ್ನು ಅಲ್ಪಸಂಖ್ಯಾತರಿಗೆ ಮೀಸಲು ಇರಿಸಿದ್ದು, ಕೋರ್ಟ್ ನಲ್ಲಿದ್ದ ರಾಮ ಮಂದಿರ ವಿವಾದ ಬಗೆ ಹರಿಸಿ, ಸೌಹಾರ್ಧಿಂದ ಮಂದಿರ ನಿರ್ಮಿಸಿದ್ದು. ಮೇಕ್ ಇನ್ ಇಂಡಿಯಾ ಮೂಲಕ ದೇಶೀಯವಾಗಿ ಉತ್ಪಾದಕತೆ ಹೆಚ್ಚಳ, ಮೇಡ್ ಇನ್ ಇಂಡಿಯಾ ಮೂಲಕ ಚಂದಿರನ ದಕ್ಷಿಣ ಕಕ್ಷೆಯಲ್ಲಿ ನಿಂತಿರುವ ಭಾರತದ ಸಾಧನೆ ಮೋದಿ ಅವರಿಂದ ಆಗಿದ್ದಲ್ಲವೇ ರಂದು ಪ್ರಶ್ನಿಸಿದರು.

ಕಾಂಗ್ರೆಸ್ ಆಡಳಿತದಲ್ಲಿ ಕ್ರೀಡಾ ಸಚಿವನಾಗಿದ್ದ ಸುರೇಶ ಕಲ್ಮಾಡಿ ಎಂಬಾತ ಕಾಮನ್ ವೆಲ್ತ್ ಗೇಮ್ಸ್ ಶೌಚಾಲಯದಲ್ಲಿ ಬಳಸುವ ಕಾಗದಕ್ಕಾಗಿ 1750 ರೂ. ಬರೆದಿದ್ದರು. ತಮಿಳುನಾಡಿನ ಎ.ರಾಜಾ ಎಂಬಾತ ಕೇಂದ್ರದಲ್ಲಿ ತಮ್ಮ ಪಕ್ಷ ಮನಮೋಹನಸಿಂಗ್ ಸರ್ಕಾರಕ್ಕೆ ಬೆಂಬಲ ನೀಡಿದೆ ಎಂದು ತಮಗೆ ಬೇಕಾದ ಖಾತೆ ಪಡೆದು 1.76ಲಕ್ಷ ಕೋಟಿ 2ಜಿ ಸ್ಪೆಕ್ಟ್ರಮ್ ಹಗರಣ ಮಾಡಿದರು. ಅಧಿಕಾರ ಸಿಕ್ಕಾಗ ಹೀಗೆ ಹಗರಣಗಳ ಸರಮಾಲೆಯನ್ನು ಸೃಷ್ಟಿಸಿದ ಕಾಂಗ್ರೆಸ್ ಇದೀಗ ಬಡತನ, ಅಭಿವೃದ್ಧಿ ಮಾತನಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮೋದಿ ಅಧಿಕಾರಕ್ಕೆ ಬರುತ್ತಲೇ ಕೋಟ್ಯಾಂತರ ಶೌಚಾಲಯ ನಿರ್ಮಾಣ, ಮಹಿಳಾ ಮೀಸಲಾತಿ, ಬ್ಯಾಂಕ್ ಖಾತೆ, ರೈತರ ಖಾತೆಗಳಿಗೆ ವಾರ್ಷಿಕ 6 ಸಾವಿರ ರೂ. ಹಣ ಜಮೆ ಹೀಗೆ ಕೇವಲ 10 ವರ್ಷಗಳಲ್ಲಿ ನಿರೀಕ್ಷೆ ಮೀರಿದ ಸಾಧನೆಯಾಗಿದೆ. ಪರಿಣಾಮವೇ ಭಾರತ ವಿಶ್ವ ಮಟ್ಟದಲ್ಲಿ ಮಿಂಚುವಂತಾಗಿದೆ ಎಂದು ಇದು ಮೋದಿ ಆಡಳಿತದ ಭ್ರಷ್ಟಾಚಾರ ರಹಿತ ಅಭಿವೃದ್ಧಿ ಸಾಧನೆ ಅಲ್ಲವೇ ಎಂದು ಪ್ರಶ್ನಿಸಿದರು.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಮುಂದುವರಿದ ಅಮೆರಿಕ ದೇಶಕ್ಕಿಂತ ಮೊದಲು ಲಸಿಕೆ ಕಂಡು ಹಿಡಿದು, ಭಾರತೀಯರಿಗೆ ಉಚಿತ ಲಸಿಕೆ ನೀಡಿದ್ದು ಮೋದಿ ಅವರ ಇಚ್ಛಾಶಕ್ತಿಯ ಆಡಳಿತ ಕಾರಣ. ಹೀಗಾಗಿ ವಿಶ್ವದ ಬಹುತೇಕ ರಾಷ್ಟ್ರಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಮನ್ನಣೆ ನೀಡುತ್ತಾರೆ. ಇಸ್ರೇಲ್ ಯುದ್ಧ ಸಂದರ್ಭದಲ್ಲಿ ಮೋದಿ ಅವರ ಮಧ್ಯಸ್ಥಿಕೆ ಪರಿಣಾಮ ಯುದ್ಧ ನಿಲ್ಲಿದ್ದರು. ಭಾರತ ಒಂದೆಡೆ ಪಾಕಿಸ್ತಾನ, ರಷ್ಯಾ ದೇಶಗಳ ವೈರತ್ವದ ರಾಷ್ಟ್ರಗಳನ್ನು ಎದುರಿಸಿ ಭವಿಷ್ಯದಲ್ಲೂ ಸುರಕ್ಷಿತ ಭಾರಕ್ಕಾಗಿ, ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಲೇ ಮಬೇಕಿದೆ‌. ಭಾರತವನ್ನು ವಿಶ್ವ ಮಟ್ಟದ ಮುಂಚೂಣಿ ಸ್ಥಾನದಲ್ಲಿ ನಿಲ್ಲಿಸುವ ಶಕ್ತಿ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ ಎಂದರು.

Advertisement

ಕರ್ನಾಟಕ ರಾಜ್ಯದ ಜನರು ಗ್ಯಾರಂಟಿ ಯೋಜನೆ ನಂಬಿ ಮೋಸ ಹೋಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಸ್ಥಾನ ಲಭಿಸಲಿದ್ದು, ಬಿಜೆಪಿ ಕಾರ್ಯಕರ್ತನಾಗಿ ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಬಿಜೆಪಿ ಪಕ್ಷವನ್ನು ಕಟ್ಟುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಸಂಸದ ರಮೇಶ ಜಿಗಜಿಣಗಿ, ರಾಮನಗೌಡ ಪಾಟೀಲ, ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next