Advertisement

ಶಿಖರ್‌ ಧವನ್‌ ಸೆಂಚುರಿ; ಲಂಕೆಗೆ 322 ರನ್‌ಗಳ ವಿಜಯದ ಗುರಿ

07:24 PM Jun 08, 2017 | Team Udayavani |

ಲಂಡನ್‌ : ಇಲ್ಲಿನ ಓವಲ್‌ ಕ್ರೀಡಾಗಣದಲ್ಲಿಂದು ಭಾರತ ಚಾಂಪ್ಯನ್ಸ್‌ ಟ್ರೋಫಿ ಪಂದ್ಯಾವಳಿಯ ತನ್ನ ಎರಡನೇ ಪಂದ್ಯದಲ್ಲಿ  ಎದುರಾಳಿ ಲಂಕೆಗೆ 322 ರನ್‌ಗಳ ವಿಜಯದ ಗುರಿಯನ್ನು ನಿಗದಿಸಿದೆ. 

Advertisement

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ನಿಗದಿತ 50 ಓವರ್‌ಗಳಲ್ಲಿ  ಆರು ವಿಕೆಟ್‌ ನಷ್ಟಕ್ಕೆ 321 ರನ್‌ಗಳ ಉತ್ತಮ ಮೊತ್ತವನ್ನು ಕಲೆ ಹಾಕಿತು. 

ಶಿಖರ್‌ ಧವನ್‌ ಸೆಂಚುರಿ (128) ರೋಹಿತ್‌ ಶರ್ಮಾ 78 ರನ್‌, ಧೋನಿ 63 ರನ್‌, ಕೇದಾರ್‌ ಜಾಧವ್‌ ಔಟಾಗದೆ ತೆಗೆದ 25 ರನ್‌ಗಳ ನೆರವಿನಿಂದ ಭಾರತಕ್ಕೆ ಉತ್ತಮ ಮೊತ್ತ ಪ್ರಾಪ್ತವಾಯಿತು. 

ಲಂಕೆಯ ಎಸೆಗಾರರಲ್ಲಿ ಲಸಿತ್‌ ಮಾಲಿಂಗ್‌ ಎರಡು ವಿಕೆಟ್‌ ಕಿತ್ತರೆ ಸುರಂಗ ಲಕ್ಮಲ್‌, ನುವಾನ್‌ ಪ್ರದೀಪ್‌, ತಿಸ್ಸರ ಪಿರೇರಾ ಮತ್ತು ಗುಣರತ್ನೆ  ತಲಾ 1 ವಿಕೆಟ್‌ ಪಡೆದರು. 

Advertisement

Udayavani is now on Telegram. Click here to join our channel and stay updated with the latest news.

Next