Advertisement
ಸೋಮವಾರ ಭಾರತಕ್ಕೆ ಭೇಟಿ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ, ರಕ್ಷಣೆ, ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರ ಗಳಲ್ಲಿ ಸಹಭಾಗಿತ್ವ, ಅಫ್ಘಾನಿಸ್ಥಾನದ ಬೆಳ ವಣಿಗೆಗಳು, ಸಾಗರೋತ್ತರ ಭಯೋತ್ಪಾದನೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ.
Related Articles
Advertisement
ಮೋದಿಗೆ ಆಹ್ವಾನ: ಒಂದು ದಿನದ ಭೇಟಿ ಮುಗಿಸಿ ಸೋಮವಾರ ರಾತ್ರಿಯೇ ಪುತಿನ್ ರಷ್ಯಾಕ್ಕೆ ವಾಪಸಾಗಿದ್ದಾರೆ. 2022ರಲ್ಲಿ ರಷ್ಯಾಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಆಹ್ವಾನವನ್ನೂ ನೀಡಿದ್ದಾರೆ.
ಚೀನ ಅಪ್ರಚೋದಿತ ವರ್ತನೆಗೆ ಕಿಡಿ: ಮೋದಿ-ಪುತಿನ್ ಭೇಟಿಗೂ ಮುನ್ನ ಭಾರತ-ರಷ್ಯಾ 2+2 ಮಾತುಕತೆ ನಡೆದಿದ್ದು, ಚೀನದ ದುಸ್ಸಾಹಸ ಯತ್ನಗಳ ಬಗ್ಗೆಯೂ ಚರ್ಚಿಸಲಾಗಿದೆ. ನೆರೆಯ ರಾಷ್ಟ್ರದಿಂದ “ತೀವ್ರ ಮಿಲಿಟರೀಕರಣ’ ಮತ್ತು ಉತ್ತರದ ಗಡಿಯಲ್ಲಿ ಚೀನದ “ಅಪ್ರಚೋದಿತ ಆಕ್ರಮಣಕಾರಿ ನೀತಿ’ಗಳ ಸವಾಲನ್ನು ಭಾರತ ಎದುರಿಸುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಆದರೆ ಬಲಿಷ್ಠ ರಾಜಕೀಯ ಇಚ್ಛಾಶಕ್ತಿ ಮತ್ತು ದೇಶವಾಸಿಗಳ ಸಾಮರ್ಥ್ಯದ ಮೂಲಕ ಇಂಥ ಎಲ್ಲ ಸವಾಲುಗಳನ್ನೂ ನಾವು ಸಮರ್ಥವಾಗಿ ಎದುರಿಸಬಲ್ಲೆವು ಎಂಬ ವಿಶ್ವಾಸವಿದೆ ಎಂದೂ ಅವರು ಹೇಳಿದ್ದಾರೆ.
ಭಾರತಕ್ಕೆ ಎಸ್-400 ಬಲ: ರಷ್ಯಾದ ಎಸ್-400 ಸುಧಾರಿತ ಕ್ಷಿಪಣಿಗಳು ಸುಮಾರು 400 ಕಿ.ಮೀ. ದೂರದಿಂದ ಬರುವ ವೈಮಾನಿಕ ದಾಳಿಯನ್ನೂ ಸಮರ್ಥವಾಗಿ ಎದುರಿಸುವ ಛಾತಿ ಹೊಂದಿವೆ. ಈಗಾಗಲೇ ಈ ಕ್ಷಿಪಣಿ ನಿಗ್ರಹ ವ್ಯವಸ್ಥೆಯ ಬಳಕೆಗೆ ಸಂಬಂಧಿಸಿ ಭಾರತೀಯ ಸಿಬ್ಬಂದಿಗೆ ರಷ್ಯಾ ತರಬೇತಿ ನೀಡಿದೆ. ಚೀನಾ ಮತ್ತು ಪಾಕಿಸ್ಥಾನ ಎರಡೂ ದೇಶಗಳಿಂದ ಆಗುವ ಅಪಾಯವನ್ನು ಎದುರಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ಮೊದಲಿಗೆ ದೇಶದ ಪಶ್ಚಿಮ ಗಡಿಯಲ್ಲಿ ನಿಯೋಜಿಸುವ ಸಾಧ್ಯತೆಯಿದೆ. 2018ರಲ್ಲೇ ಭಾರತ ಮತ್ತು ರಷ್ಯಾವು ಎಸ್-400 ವ್ಯವಸ್ಥೆಯ ಖರೀದಿ ಒಪ್ಪಂದ ಮಾಡಿಕೊಂಡಿದ್ದವು. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಅಮೆರಿಕ, “ಭಾರತವೇನಾದರೂ ಈ ಒಪ್ಪಂದವನ್ನು ಮುಂದುವರಿಸಿದರೆ ನಿರ್ಬಂಧವನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆಯನ್ನೂ ನೀಡಿತ್ತು. ಆದರೂ ಅಮೆರಿಕದ ಬೆದರಿಕೆಗೆ ಮಣಿಯದೇ ಭಾರತವು ಈ ಒಪ್ಪಂದವನ್ನು ಮುಂದುವರಿಸಿಕೊಂಡು ಬಂದಿದೆ.
ಸವಾಲುಗಳ ನಡುವೆಯೂ ಸದೃಢ ಸ್ನೇಹ: ಮೋದಿಹಲವಾರು ಸವಾಲುಗಳ ನಡುವೆಯೂ ಭಾರತ ಮತ್ತು ರಷ್ಯಾ ನಡುವಿನ ಆತ್ಮೀಯ ಸಂಬಂಧ ಹಾಗೂ ಸ್ನೇಹವು ಸ್ಥಿರವಾಗಿದೆ. ಕೊರೊನಾ ಸೋಂಕಿನ ನಡುವೆಯೂ ಪುತಿನ್ ಅವರು ಭಾರತಕ್ಕೆ ಭೇಟಿ ನೀಡಿರುವುದು ಉಭಯ ದೇಶಗಳ ಸಂಬಂಧದಲ್ಲಿ ಅವರಿಗಿರುವ ಬದ್ಧತೆಯನ್ನು ತೋರಿಸಿದೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ಅತ್ಯಂತ
ಶ್ರೇಷ್ಠ ಶಕ್ತಿ: ಪುತಿನ್
ಭಾರತವು ಅತ್ಯಂತ ಶ್ರೇಷ್ಠ ಶಕ್ತಿಯಾಗಿದ್ದು, ನಮ್ಮ ಸದಾಕಾಲದ ಮಿತ್ರ ರಾಷ್ಟ್ರವೂ ಆಗಿದೆ ಎಂದು ರಷ್ಯಾ ಅಧ್ಯಕ್ಷ ಪುತಿನ್ ಶ್ಲಾ ಸಿ ದ್ದಾರೆ. ನಮ್ಮ ದೇಶಗಳ ನಡುವಿನ ಸಂಬಂಧವು ಮತ್ತಷ್ಟು ಬೆಳೆಯು ತ್ತಿದ್ದು, ಭವಿಷ್ಯದತ್ತ ನಾವು ಮುಖ ಮಾಡಿದ್ದೇವೆ ಎಂದೂ ಹೇಳಿದ್ದಾರೆ. ಪ್ರಮುಖ ಒಪ್ಪಂದಗಳು
-ಉತ್ತರಪ್ರದೇಶದ ಅಮೇಠಿಯ ಘಟಕದಲ್ಲಿ 6 ಲಕ್ಷದಷ್ಟು ಎಕೆ-203 ರೈಫಲ್‌ಗಳನ್ನು ಜಂಟಿಯಾಗಿ ತಯಾರಿಸುವುದು
-10 ವರ್ಷಗಳ ಕಾಲ ಭಾರತ-ರಷ್ಯಾ ಸೇನಾ ಸಹಭಾಗಿತ್ವವನ್ನು ಮುಂದುವರಿಸುವುದು
-2019ರ ಫೆಬ್ರವರಿಯಲ್ಲಿ ನಡೆದ ಕಲಾಶ್ನಿಕೋವ್ ಸರಣಿಗಳ ಉತ್ಪಾದನೆ ಒಪ್ಪಂದದಲ್ಲಿ ತಿದ್ದುಪಡಿ ತರಲು ನಿರ್ಧಾರ