Advertisement

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

08:10 PM Sep 28, 2020 | Hari Prasad |

ಹೊಸದಿಲ್ಲಿ: ಲಢಾಕ್ ಭಾಗದಲ್ಲಿ ಭಾರತ ಮತ್ತು ಚೀನಾ ದೇಶಗಳ ವಾಸ್ತವ ನಿಯಂತ್ರಣ ರೇಖೆಯ ಬಳಿ ಕಳೆದ ಐದು ತಿಂಗಳುಗಳಿಂದ ನಡೆಯುತ್ತಿರುವ ಮೇಲಾಟ ವಿಪರೀತಕ್ಕೇರುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ.

Advertisement

ಎರಡೂ ದೇಶಗಳು ತಮ್ಮ ಸೇನಾ ಬಲವನ್ನು ಮಾತ್ರವಲ್ಲದೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೂ ಸಹ ಈ ಭಾಗದಲ್ಲಿ ನಿಯೋಜನೆ ಮಾಡಿ ಪರಸ್ಪರ ಹಲ್ಲು ಮಸೆಯುತ್ತಿವೆ.

ಪೀಪಲ್ಸ್ ಲಿಬರೇಷನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡರ್ ಸುಮಾರು 2 ಸಾವಿರ ಕಿಲೋಮೀಟರ್ ದೂರ ಸಾಗಿ ಶತ್ರು ಪಾಳಯದ ಗುರಿಯನ್ನು ಭೇದಿಸಬಲ್ಲ ಕ್ಷಿಪಣಗಳನ್ನು ಟಿಬೆಟ್ ಹಾಗೂ ಕ್ಸಿನ್ ಝಿಯಾಂಗ್ ಪ್ರದೇಶದಲ್ಲಿ ನಿಯೋಜಿಸಿದೆ.

ಇದಕ್ಕೆ ಪ್ರತಿರೋಧವೆಂಬಂತೆ ಭಾರತೀಯ ಸೇನೆಯೂ ಸಹ 500 ಕಿ.ಮೀ. ಅಂತರಕ್ಕೆ ಸಾಗಬಲ್ಲ ಬ್ರಹ್ಮೋಸ್ ಕ್ಷಿಪಣಿ, 800 ಕಿ.ಮೀ. ಅಂತರದ ನಿರ್ಭಯ್ ಕ್ಷಿಪಣಿ ಮತ್ತು 40 ಕಿ.ಮೀ. ಅಂತರವನ್ನು ಬೇಧಿಸಬಲ್ಲ ನೆಲದಿಂದ ಆಗಸಕ್ಕೆ ಚಿಮ್ಮುವ ಆಕಾಶ್ ಕ್ಷಿಪಣಿಗಳನ್ನು ನಿಯೋಜಿಸಿದೆ.

ಚೀನಾದಿಂದ ಎದುರಾಗಬಹುದಾದ ಯಾವುದೇ ಪ್ರತಿಕೂಲ ಸನ್ನಿವೇಶಗಳನನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಭಾರತೀಯ ಸೇನೆ ತನ್ನ ಬತ್ತಳಿಕೆಯಲ್ಲಿರುವ ಈ ಪ್ರಮುಖ ಸೂಪರ್ ಸಾನಿಕ್ ಬ್ರಹ್ಮೋಸ್, ಸಬ್ ಸಾನಿಕ್ ನಿರ್ಭಯ್ ಹಾಗೂ ಆಕಾಶ್ ಕ್ಷಿಪಣಿಗಳನ್ನು ಈ ಭಾಗದಲ್ಲಿ ಯಶಸ್ವಿಯಾಗಿ ನಿಯೋಜಿಸಿದೆ ಎಂದು ಹೆಸರು ಹೇಳಲಿಚ್ಛಿಸದ ಉನ್ನತ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆಯನ್ನು ಆಧರಿಸಿ ಹಿಂದೂಸ್ಥಾನ್ ಟೈಮ್ಸ್ ವೆಬ್ ಸೈಟ್ ವರದಿ ಮಾಡಿದೆ.

Advertisement

ಇತ್ತ, ಚೀನಾ ಕೇವಲ ತಾನು ಆಕ್ರಮಿಸಿರುವ ಅಕ್ಸಾಯ್ ಚಿನ್ ಭಾಗದಲ್ಲಿ ಮಾತ್ರವೇ ತನ್ನ ಸೇನಾಬಲವನ್ನು ನಿಯೋಜಿಸಿರುವುದಲ್ಲ ಬದಲಾಗಿ, ವಾಸ್ತವ ನಿಯಂತ್ರಣ ರೇಖೆಯಿಂದ (LAC) 3,488 ಕಿಲೋಮೀಟರ್ ಉದ್ದಕ್ಕಿರುವ ಕಷ್ಘಾರ್, ಹೊಟಾನ್, ಲ್ಹಾಸಾ ಮತ್ತು ನಿಯಾಂಗ್ ಚಿ ಪ್ರದೇಶಗಳಲ್ಲೂ ತನ್ನ ಸೇನಾ ಬಲವನ್ನು ನಿಯೋಜಿಸಿ ಭಾರತಕ್ಕೆ ಸೆಡ್ಡು ಹೊಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next