ಹೊಸದಿಲ್ಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,59,623 ಹೊಸ ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಶನಿವಾರ ಪತ್ತೆಯಾದ ಪ್ರಕರಣಗಳಿಗಿಂತ 12.4 ಶೇಕಡಾ ಹೆಚ್ಚಿನ ಪ್ರಕರಣಗಳು ರವಿವಾರ ದೃಢವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇಂದಿನ 1.59 ಲಕ್ಷ ಹೊಸ ಪ್ರಕರಣಗಳಿಂದ ದೇಶದ ಒಟ್ಟು ಸೋಂಕಿತರ ಸಂಖ್ಯೆ 3,55,28,004 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 40,863 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದುವರೆಗೆ ದೇಶಾದ್ಯಂತ ಒಟ್ಟು 3,44,53,603 ಮಂದಿ ಕೋವಿಡ್ ಸೋಂಕಿತರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಚೇತರಿಕೆ ದರವು ಈಗ 96.98 ಪ್ರತಿಶತದಷ್ಟಿದೆ.
ದೇಶದಲ್ಲಿ ಸದ್ಯ 5,90,611 ಸಕ್ರಿಯ ಕೋವಿಡ್ ಸೋಂಕು ಪ್ರಕರಣಗಳಿವೆ. ಇದೇ ವೇಳೆ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 3,623ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ:ಕಳಚಿದ ಪಾರಿಜಾತ ಪರಂಪರೆಯ ಕೊಂಡಿ: ಹಿರಿಯ ಕಲಾವಿದ ಬಸವಲಿಂಗಯ್ಯ ಹಿರೇಮಠ ನಿಧನ
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೋವಿಡ್ -19 ಪ್ರಕರಣಗಳು ಕಂಡು ಬಂದಿದ್ದು, ಅಲ್ಲಿ 41,434 ಸೋಂಕು ಪ್ರಕರಣಗಳು ವರದಿಯಾಗಿದೆ. ಉಳಿದಂತೆ, ದೆಹಲಿಯಲ್ಲಿ 20,181 ಪ್ರಕರಣಗಳು, ಪಶ್ಚಿಮ ಬಂಗಾಳದಲ್ಲಿ 18,802 ಪ್ರಕರಣಗಳು, ತಮಿಳುನಾಡಿನಲ್ಲಿ 10,978 ಪ್ರಕರಣಗಳು ಮತ್ತು ಕರ್ನಾಟಕದಲ್ಲಿ 8,906 ಪ್ರಕರಣಗಳು ವರದಿಯಾಗಿವೆ.
ಈ ಐದು ರಾಜ್ಯಗಳು ಭಾನುವಾರದಂದು ವರದಿಯಾದ ದೈನಂದಿನ ಹೊಸ ಪ್ರಕರಣಗಳಲ್ಲಿ 62.84 ಪ್ರತಿಶತದಷ್ಟು ಪಾಲನ್ನು ಹೊಂದಿದ್ದು, 25.96 ಪ್ರತಿಶತ ಹೊಸ ಪ್ರಕರಣಗಳಿಗೆ ಮಹಾರಾಷ್ಟ್ರ ಮಾತ್ರ ಕಾರಣವಾಗಿದೆ.