ನವದೆಹಲಿ:ದೇಶದಲ್ಲಿ ಸತತ ಒಂಬತ್ತು ದಿನಗಳಿಂದ ಕೋವಿಡ್ ಸಂಖ್ಯೆ ಹೆಚ್ಚುತ್ತಲೇ ಇದ್ದು, ಕಳೆದ 24ಗಂಟೆಯಲ್ಲಿ ಸುಮಾರು 40,000 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದು 2020ರ ನವೆಂಬರ್ 29ರ ಬಳಿಕ ಗರಿಷ್ಠ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನೂ ಓದಿ:ಮುಂದುವರೆದ ಅಧ್ಯಾಯ, ಒಂದು ಗಂಟೆಯ ಕಥೆ: ಈ ವಾರ ತೆರೆಗೆ ಎರಡು ಚಿತ್ರಗಳು
ಭಾರತದಲ್ಲಿ ಒಟ್ಟು 1,15,14,331 ಕೋವಿಡ್ ಪ್ರಕರಣಗಳಿದ್ದು, ಕಳೆದ 24ಗಂಟೆಯಲ್ಲಿ 154 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಭಾರತದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದವರ ಸಂಖ್ಯೆ 1,59,370ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಸೋಂಕು ಪ್ರಮಾಣ ಹೆಚ್ಚುತ್ತಿರುವಂತೆಯೇ ಚೇತರಿಕೆ ಪ್ರಮಾಣ ಶೇ.96.41ಕ್ಕೆ ಕುಸಿದಿದೆ. ಈವರೆಗೆ 1.10ಕೋಟಿ ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಪ್ರಕರಣ ಹೆಚ್ಚುತ್ತಿದ್ದು, 25,833 ಪ್ರಕರಣ ಪತ್ತೆಯಾಗಿದೆ. ಕೇರಳ ಮತ್ತು ಪಂಜಾಬ್ ನಲ್ಲಿಯೂ ಸೋಂಕು ಪ್ರಕರಣ ಏರಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಪಂಜಾಬ್ ನ ಅಮೃತ್ ಸರ್ ನಲ್ಲಿ ಅಧಿಕಾರಿಗಳು ಕೋವಿಡ್ ಹೆಚ್ಚಳವಾಗುತ್ತಿರುವ ಒಂಬತ್ತು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂವನ್ನು ಜಾರಿಗೊಳಿಸಿದ್ದಾರೆ.