Advertisement

ಕೋವಿಡ್19: ಕಳೆದ 160 ದಿನಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೋಂಕಿನ ಪ್ರಕರಣಗಳು ಪತ್ತೆ..!

11:32 AM Aug 23, 2021 | Team Udayavani |

ನವ ದೆಹಲಿ : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 25,072 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 389 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಇಂದು (ಸೋಮವಾರ, ಆಗಸ್ಟ್ 23) ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿ ಅಂಶದಲ್ಲಿ ಮಾಹಿತಿ ನೀಡಿದೆ.

Advertisement

ಕಳೆದ 160 ದಿನಗಳಲ್ಲಿ ಇದು ಅತ್ಯಂತ ಕಡಿಮೆ ಪ್ರಮಾಣದಲ್ಲಿ ದಿನವೊಂದರಲ್ಲಿ ದಾಖಲಾದ ಸೋಂಕಿನ ಪ್ರಮಾಣವಾಗಿದ್ದು, ಈ ಮೂಲಕ ಒಟ್ಟು ಕೋವಿಡ್ ಸೋಂಕಿನ ಪ್ರಮಾಣ 3, 24, 49, 306 ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ : ಆ.23ರಂದು ಸಂಜೆ 4ಗಂಟೆಗೆ ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ನಿಹಾಲ್ ತಾವ್ರೋ

ಇನ್ನು, ಕಳೆದೊಂದು ದಿನದಲ್ಲಿ 44,157 ಮಂದಿ ಸೋಂಕಿನಿಂದ ಗುಣ ಮುಖರಾಗಿದ್ದು, ಒಟ್ಟು ಈವರೆಗೆ 3,16, 80,626 ಮಂದು ಚೇತರಿಸಿಕೊಂಡಿದ್ದಾರೆ. ದೇಶದಾದ್ಯಂತ ಚೇತರಿಕೆಯ ಪ್ರಮಾಣ ಶೇಕಡಾ 97. 63 ರಷ್ಟಿದೆ ಎಂದು ತಿಳಿಸಿದೆ.

ಸದ್ಯ, ದೇಶದಾದ್ಯಂತ ಕೋವಿಡ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 3,33,924 ಇದ್ದು, ಒಟ್ಟು ಸೋಂಕಿನಿಂದ ಮೃತ ಪಟ್ಟವರ ಸಂಖ್ಯೆ 4,34, 756 ಕ್ಕೆ ತಲುಪಿದೆ. ಇನ್ನು, ದೈನಂದಿನ ಪಾಸಿಟಿವಿಟಿ ರೇಟ್ ಶೇಕಡಾ 1.94 ಆದರೇ, ವಾರದ ಪಾಸಿಟಿವಿಟಿ ರೇಟ್ ಶೇಕಡಾ 1.91 ಇದೆ ಎಂದು ಕೂಡ ಸಚಿವಾಲಯ ತಿಳಿಸಿದೆ.

Advertisement

ನಿನ್ನೆ (ಭಾನುವಾರ, ಆಗಸ್ಟ್ 22) ಒಂದು ದಿನದಲ್ಲಿ 12,95,160 ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಒಟ್ಟು ಈವರೆ‍ಗೆ ಭಾರತದಲ್ಲಿ 50,75,51,399 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ತಿಳಿಸಿರುವುದಾಗಿ ಸಚಿವಾಲಯ ಮಾಹಿತಿ ನೀಡಿದೆ.

ಇನ್ನು, ಕಳೆದ 24 ಗಂಟೆಗಳಲ್ಲಿ  7,95,543 ಕೋವಿಡ್ ಲಸಿಕೆಯ ಡೋಸ್ ಗಳನ್ನು ಪೂರೈಸಲಾಗಿದ್ದು, ಈವರೆಗೆ ಭಾರತದಾದ್ಯಂತ 58,25,49,595 ಕೋವಿಡ್ ಡೋಸ್ ಗಳನ್ನು ನೀಡಲಾಗಿದೆ ಎಂದು ಕೂಡ ತಿಳಿಸಿದೆ.

ಇದನ್ನೂ ಓದಿ : ಶಾಲಾ- ಕಾಲೇಜುಗಳಿಗೆ ಮಕ್ಕಳನ್ನು ಕಳುಹಿಸಿ: ಸಚಿವ ಈಶ್ವರಪ್ಪ ಮನವಿ

Advertisement

Udayavani is now on Telegram. Click here to join our channel and stay updated with the latest news.

Next