Advertisement

ಭುಗಿಲೆದ್ದ ಹಿಂಸಾಚಾರ –ಶ್ರೀಲಂಕಾಕ್ಕೆ ಸೇನೆ ರವಾನಿಸಲ್ಲ: ಊಹಾಪೋಹ ಎಂದ ಭಾರತ

12:54 AM May 12, 2022 | Team Udayavani |

ನವದೆಹಲಿ: ತೀವ್ರ ಆರ್ಥಿಕ ಬಿಕ್ಕಟ್ಟು, ಹಿಂಸಾಚಾರದಿಂದ ನಲುಗಿರುವ ದ್ವೀಪರಾಷ್ಟ್ರ ಶ್ರೀಲಂಕಾಕ್ಕೆ ಭಾರತ ಸೇನಾಪಡೆಯನ್ನು ಕಳುಹಿಸಲಿದೆ ಎಂಬ ಊಹಾಪೋಹದ ವರದಿಯನ್ನು ಭಾರತದ ಹೈಕಮಿಷನ್ ಬುಧವಾರ (ಮೇ 11) ಸಾರಸಗಟಾಗಿ ತಳ್ಳಿ ಹಾಕಿದ್ದು, ಲಂಕಾದ ಪ್ರಜಾಪ್ರಭುತ್ವವನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುವುದಾಗಿ ತಿಳಿಸಿದೆ.

Advertisement

ಇದನ್ನೂ ಓದಿ:ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಇಬ್ಬರು ಪುರಸಭೆ ಸದಸ್ಯರ ಸದಸ್ಯತ್ವ ಅನರ್ಹ

1948ರಲ್ಲಿ ಬ್ರಿಟನ್ ನಿಂದ ಸ್ವತಂತ್ರಗೊಂಡ ನಂತರ ಶ್ರೀಲಂಕಾದಲ್ಲಿ ಇದೇ ಮೊದಲ ಬಾರಿಗೆ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಗುರಿಯಾಗಿದೆ. ಮಾಜಿ ಪ್ರಧಾನಿ ಮಹಿಂದ ರಾಜಪಕ್ಸೆ ಮತ್ತು ಕುಟುಂಬ ಸದಸ್ಯರು ಭಾರತಕ್ಕೆ ಪಲಾಯಗೈದಿದ್ದಾರೆ ಎಂದು ಸ್ಥಳೀಯ ಸಾಮಾಜಿಕ ಜಾಲತಾಣಗಳ ಸುದ್ದಿ ನಕಲಿ ಎಂದು ಶ್ರೀಲಂಕಾದಲ್ಲಿನ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.

ಸೋಮವಾರ ರಾಜೀನಾಮೆ ನೀಡಿದ ನಂತರ ಮಹೀಂದ ರಾಜಪಕ್ಸೆ ಮತ್ತು ಕುಟುಂಬ ಸದಸ್ಯರು ಎಲ್ಲಿ ಅಡಗಿದ್ದಾರೆ ಎಂಬ ಬಗ್ಗೆ ಊಹಾಪೋಹದ ಸುದ್ದಿಗಳು ಹರಿದಾಡುತ್ತಿದೆ. ಏತನ್ಮಧ್ಯೆ ದ್ವೀಪರಾಷ್ಟ್ರ ಶ್ರೀಲಂಕಾದ ಪ್ರಜಾಪ್ರಭುತ್ವ, ಆರ್ಥಿಕ ಚೇತರಿಕೆ ಬಗ್ಗೆ ಭಾರತ ಪೂರ್ಣ ಪ್ರಮಾಣದಲ್ಲಿ ಬೆಂಬಲಿಸಿದೆ ಎಂದು ತಿಳಿಸಿದೆ.

ಮತ್ತೊಂದೆಡೆ ಮಹೀಂದ ರಾಜಪಕ್ಸೆ ಭಾರತಕ್ಕೆ ಪಲಾಯನ ಮಾಡಿದ್ದಾರೆ, ಭಾರತ ಲಂಕಾಕ್ಕೆ ಸೇನೆಯನ್ನು ರವಾನಿಸಲಿದೆ ಎಂಬ ಕೆಲವು ಮಾಧ್ಯಮಗಳ ಹಾಗೂ ಸಾಮಾಜಿಕ ಜಾಲತಾಣಗಳ ಊಹಾಪೋಹದ ಸುದ್ದಿಯನ್ನು ಭಾರತದ ಹೈಕಮಿಷನ್ ತಳ್ಳಿಹಾಕಿದೆ. ಶ್ರೀಲಂಕಾಕ್ಕೆ ಸೇನೆಯನ್ನು ಕಳುಹಿಸುವ ಯಾವ ಪ್ರಸ್ತಾಪವೂ ಭಾರತದ ಸರ್ಕಾರದ ಮುಂದಿಲ್ಲ ಎಂದು ಟ್ವೀಟ್ ಮೂಲಕ ತಿಳಿಸಿದೆ.

Advertisement

ತಮಿಳುನಾಡು ಕರಾವಳಿಯಲ್ಲಿ ಕಣ್ಗಾವಲು
ಶ್ರೀಲಂಕಾದಲ್ಲಿ ಬದುಕು ಕಷ್ಟವೆನಿಸುವ ಸ್ಥಿತಿ ಬಂದೊ ಡನೆಯೇ ಅಲ್ಲಿನ ನಾಗರಿಕರು ಹತ್ತಿರದ ರಾಷ್ಟ್ರವಾದ ಭಾರತಕ್ಕೆ ಕಾಲ್ಕಿಳಲಾರಂಭಿಸಿದ್ದಾರೆ. ಹಾಗಾಗಿ ಶ್ರೀಲಂಕಾ ನಾಗರಿಕರ ಒಳನುಸುಳುವಿ ಕೆಯನ್ನು ತಡೆಯಲೆಂದು ತಮಿಳುನಾಡಿನ ಕರಾವಳಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕಣ್ಗಾವಲು ಕ್ರಮ ತೆಗೆದುಕೊಳ್ಳಲಾಗಿದೆ. ಮಾರ್ಚ್‌ ತಿಂಗಳಿನಿಂದಲೇ ಹಲವು ಕುಟುಂಬಗಳು ಶ್ರೀಲಂಕಾ ತ್ಯಜಿಸಿ, ದೋಣಿಗಳ ಮೂಲಕ ರಾಮೇಶ್ವರ ಬಂದರಿಗೆ ಬಂದಿಳಿಯುತ್ತಿವೆ. ಈ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದಾಗಿ ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭದ್ರತಾ ಪಡೆ ನಿಯೋಜಿಸಲಾಗಿದೆ. ಯಾವುದೇ ಕಾರಣಕ್ಕೂ ಶ್ರೀಲಂಕಾ ನಾಗರಿಕರನ್ನು ದೇಶದೊಳಗೆ ಬಾರದಂತೆ ನೋಡಿಕೊಳ್ಳಲು ಸೂಚಿ ಸ ಲಾಗಿದೆ. ಶ್ರೀಲಂಕಾ ಜೈಲಿನಿಂದ ಕಾಣೆಯಾ ಗಿರುವ 50 ಖೈದಿಗಳು, ನಿಷೇಧಿತ “ಲಿಬರೇಷನ್‌ ಟೈಗರ್ಸ್‌ ಆಫ್ ತಮಿಳ್‌ ಈಳಂ’ನ (ಎಲ್‌ಟಿಟಿಇ) ಸದಸ್ಯರೂ ಭಾರತಕ್ಕೆ ಒಳನುಸುಳುವ ಸಾಧ್ಯತೆ ಹೆಚ್ಚಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next