ಹೊಸದಿಲ್ಲಿ : ಅತೀ ವೇಗದಲ್ಲಿ ಬೆಳೆಯುತ್ತಿರುವ ವಿಶ್ವದ ಪ್ರಮುಖ ಆರ್ಥಿಕ ರಾಷ್ಟ್ರ ಎಂಬ ಸ್ಥಾನಮಾನವನ್ನು ಭಾರತ ಪುನಃ ಸಂಪಾದಿಸಿದೆ.
ಒಂದು ವರ್ಷದ ಅಂತರದ ಬಳಿಕ ಭಾರತ, ಕಳೆದ ಅಕ್ಟೋಬರ್ – ಡಿಸೆಂಬರ್ ತ್ತೈಮಾಸಿಕ ಆರ್ಥಿಕ ಪ್ರಗತಿಯಲ್ಲಿ ಚೀನವನ್ನು ಹಿಂದಿಕ್ಕಿದೆ.
ಭಾರತದ ಈ ಪ್ರಗತಿಗೆ ಸರಕಾರದಿಂದಾಗಿರುವ ಅಧಿಕ ಮೊತ್ತದ ಖರ್ಚು ಮತ್ತು, ಉತ್ಪಾದನೆ ಹಾಗೂ ಸೇವಾ ಕ್ಷೇತ್ರ ಚುರುಕಿನ ಪುನಶ್ಚೇತನವನ್ನು ಕಂಡಿರುವುದೇ ಮುಖ್ಯ ಕಾರಣವಾಗಿದೆ.
ಏಶ್ಯದ ಮೂರನೇ ಅತೀ ದೊಡ್ಡ ಆರ್ಥಿಕತೆ ಎನಿಸಿರುವ ಭಾರತ ಕಳೆದ ಡಿಸೆಂಬರ್ ತ್ತೈಮಾಸಿಕದಲ್ಲಿ ಶೇ.7.2ರ ಜಿಡಿಪಿಯನ್ನು ಸಾಧಿಸಿದೆ. ಕಳೆದ ಐದು ತ್ತೈಮಾಸಿಕಗಳಲ್ಲೇ ಅತ್ಯಂತ ವೇಗದ ಪ್ರಗತಿಯನ್ನು ಭಾರತ ಡಿಸೆಂಬರ್ ತ್ತೈಮಾಸಿಕದಲ್ಲಿ ದಾಖಲಿಸಿದೆ. ಈ ತ್ತೈಮಾಸಿಕದಲ್ಲಿ ಚೀನ ದಾಖಲಿಸಿರುವ ಆರ್ಥಿಕ ಪ್ರಗತಿ (ಜಿಡಿಪಿ) ಶೇ.6.8.
2016ರ ಕೊನೆಯ ಮೂರು ತಿಂಗಳಲ್ಲಿ ಭಾರತ ಆತ್ಯಂತ ವೇಗದ ಆರ್ಥಿಕ ಪ್ರಗತಿಯನ್ನು ದಾಖಲಿಸಿತ್ತು.