ನವ ದೆಹಲಿ : ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 35, 178 ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, 148 ದಿನಗಳ ನಂತರ ಇದೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೋಂಕು ದಾಖಲಾಗಿದ್ದು, ಒಟ್ಟು, 3,67, 415 ಸಕ್ರಿಯ ಪ್ರಕರಣಗವೆ. ಇನ್ನು, ಸೋಂಕಿನಿಂದ ಒಟ್ಟು 440 ಮಂದಿ ಸೋಂಕಿನಿಂದ ಮೃತ ಪಟ್ಟಿರುವುದಾಗಿ ಇಂದು (ಬುಧವಾರ, ಆಗಸ್ಟ್ 18) ಬಿಡುಗಡೆಗೊಳಿಸಿರುವ ಕೋವಿಡ್ ಅಂಕಿ ಅಂಶದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
37, 169 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈ ಮೂಲಕ ದೇಶದಲ್ಲಿ ಗುಣಮುಖರಾದವರ ಪ್ರಮಾಣ ಶೇಕಡಾ 97.52 ಗೆ ಏರಿಕೆಯಾಗಿದೆ. ವಾರದ ಪಾಸಿಟಿವಿಟಿ ರೇಟ್ ಶೇಕಡಾ 1.95 ಇದ್ದು, ದೈನಿಂದಿನ ಪಾಸಿಟಿವಿಟ್ ರೇಟ್ ಶೇಕಡಾ 1.96 ರಷ್ಟಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ : ರಾಷ್ಟ್ರೀಯ ನಾಯಕರನ್ನು ಗೌರವಿಸಿ, ಇಲ್ಲಿ ಪಕ್ಷ, ಜಾತಿ, ಧರ್ಮ ಭೇದವಿಲ್ಲ :ಕೇಂದ್ರ ಸಚಿವೆ ಶೋಭಾ
ಲಸಿಕಾ ಅಭಿಯಾನದ ಅಡಿಯಲ್ಲಿ, ಕಳೆದ ಒಂದು ದಿನದ ಅವಧಿಯಲ್ಲಿ 55,05,075 ಡೋಸ್ ಗಳನ್ನು ನೀಡಲಾಗಿದ್ದು, ಈವರೆಗೆ ದೇಶದಾದ್ಯಂತ 56, 06, 52, 030 ಕೋವಿಡ್ ಡೋಸ್ ಗಳನ್ನು ನೀಡಲಾಗಿದೆ ಎಂದು ಕೂಡ ಮಾಹಿತಿ ನೀಡಿದೆ.
ಇನ್ನು, 49, 84, 27, 083 ಈವರೆಗೆ ದೇಶದಾದ್ಯಂತ ಮಾಡಲಾಗಿದ್ದು, ನಿನ್ನೆ ಒಂದು ದಿನದಲ್ಲಿ 17,97,559 ಮಂದಿಗೆ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ : ಗರ್ಭಪಾತ ಹಕ್ಕು ಕಸಿದುಕೊಳ್ಳಲಾಗದು: ಕೇರಳ ಹೈಕೋರ್ಟ್ ಅಭಿಮತ