ನವದೆಹಲಿ:ಭಾರತದಲ್ಲಿ ಕೋವಿಡ್ ಸೋಂಕು ಪ್ರಕರಣ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 22,775 ಪ್ರಕರಣ ವರದಿಯಾಗಿದೆ. ಕೋವಿಡ್ ಸೋಂಕಿನಿಂದ 406 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ (ಜನವರಿ 01) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಗಂಗಾವತಿ:ನಿಧಿಗಳ್ಳರಿಂದ ಐತಿಹಾಸಿಕ ದೇವಘಾಟ್ ಅಮೃತೇಶ್ವರ ಗುಡಿ ಧ್ವಂಸ
ದೇಶದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1,04,781ಕ್ಕೆ ಏರಿಕೆಯಾಗಿದೆ. ಅಲ್ಲದೇ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 4,81,486ಕ್ಕೆ ಹೆಚ್ಚಳವಾಗಿದೆ.
24ಗಂಟೆಗಳ ಅವಧಿಯಲ್ಲಿ 13,420 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಕೋವಿಡ್ ಸೋಂಕಿನಿಂದ 8,949 ಮಂದಿ ಗುಣಮುಖರಾಗಿದ್ದು, ಇದರೊಂದಿಗೆ ದೇಶಾದ್ಯಂತ ಈವರೆಗೆ ಒಟ್ಟು 3,43,75,312 ಮಂದಿ ಚೇತರಿಸಿಕೊಂಡಿದ್ದಾರೆ.
ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 1,431ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 454 ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ದೆಹಲಿಯಲ್ಲಿ 351, ತಮಿಳುನಾಡಿನಲ್ಲಿ 118, ಗುಜರಾತ್ 115, ಕೇರಳದಲ್ಲಿ 109, ರಾಜಸ್ಥಾನ 69, ತೆಲಂಗಾಣ 62, ಹರ್ಯಾಣ 37, ಕರ್ನಾಟಕದಲ್ಲಿ 34 ಪ್ರಕರಣ ವರದಿಯಾಗಿದೆ.