Advertisement

ವಿಶ್ವದ ಅತ್ಯಂತ ಭ್ರಷ್ಟ ದೇಶಗಳ ಪಟ್ಟಿ: ಭಾರತಕ್ಕೆ 81ನೇ ಸ್ಥಾನ

12:26 PM Feb 22, 2018 | Team Udayavani |

ಹೊಸದಿಲ್ಲಿ : ಟ್ರಾನ್ಸಪರೆನ್ಸಿ ಇಂಟರ್‌ನ್ಯಾಶನಲ್‌ ಬಿಡುಗಡೆ ಮಾಡಿರುವ 2017ರ ವಿಶ್ವದ ಅತ್ಯಂತ ಭ್ರಷ್ಟ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 81ನೇ ಸ್ಥಾನ ಲಭಿಸಿದೆ.

Advertisement

ಏಶ್ಯ ಪೆಸಿಫಿಕ್‌ ಪ್ರಾಂತ್ಯದ ಅತ್ಯಂತ ಭ್ರಷ್ಟ ದೇಶಗಳನ್ನು ಪಟ್ಟಿ ಮಾಡುವಲ್ಲಿ ಟ್ರಾನ್ಸಪರೆನ್ಸಿ ಇಂಟರ್‌ನ್ಯಾಶನಲ್‌, “ಘೋರ ಭ್ರಷ್ಟಾಚಾರ ಮತ್ತು ಅತ್ಯಂತ ಕಳಪೆ ಪತ್ರಿಕಾ ಸ್ವಾತಂತ್ರ್ಯ’ ಇರುವುದನ್ನು ಪರಿಗಣಿಸಿದೆ.

ಅತ್ಯಂತ ಭ್ರಷ್ಟ ದೇಶಗಳ ಪಟ್ಟಿಯಲ್ಲಿ 180 ದೇಶಗಳನ್ನು ಒಳಗೊಳಿಸಲಾಗಿದೆ. ಸಾರ್ವಜನಿಕ ರಂಗದಲ್ಲಿನ ಭ್ರಷ್ಟಾಚಾರವನ್ನು ವಿಶೇಷವಾಗಿ ದೃಷ್ಟಿಯಲ್ಲಿರಿಸಿಕೊಳ್ಳಲಾಗಿದೆ. 2016ರಲ್ಲಿ ಭಾರತ, 176 ದೇಶಗಳ ಪಟ್ಟಿಯಲ್ಲಿ 79ನೇ ಸ್ಥಾನದಲ್ಲಿತ್ತು. 2017ರಲ್ಲಿ 180 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 81ನೇ ಸ್ಥಾನ ಪ್ರಾಪ್ತವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next