Advertisement
2016ರಲ್ಲಿ ಅಂದಿನ ಮಾಲ್ಡೀವ್ ಅಧ್ಯಕ್ಷರಾಗಿದ್ದ ಅಬ್ದುಲ್ಲಾ ಯಮೀನ್ ಅವರು ಈ ವಿಮಾನಕ್ಕಾಗಿ ಭಾರತದ ಮುಂದೆ ಬೇಡಿಕೆ ಇರಿಸಿದ್ದರು.
Related Articles
Advertisement
ದ್ವೀಪರಾಷ್ಟ್ರ ಮಾಲ್ಡೀವ್ಸ್ ನೊಂದಿಗೆ ರಾಜತಾಂತ್ರಿಕ ಸಂಬಂಧ ಗಟ್ಟಿಗೊಳಿಸುವುದು ಹಾಗೂ ಈ ಭಾಗದ ಸಮುದ್ರ ಪ್ರದೇಶದಲ್ಲಿ ಚೀನಾದ ಕಳ್ಳ ವ್ಯವಹಾರದ ಮೇಲೆ ಕಣ್ಗಾವಲು ಇರಿಸುವುದೂ ಸಹ ಭಾರತದ ಉದ್ದೇಶವಾಗಿದೆ ಎಂಬ ವಿಶ್ಲೇಷಣೆ ಇದೀಗ ಕೇಳಿಬರಲಾರಂಭಿಸಿದೆ.
ಇದನ್ನೂ ಓದಿ: ಸೆ.30ರಂದು ಬಾಬ್ರಿ ಧ್ವಂಸ ಅಂತಿಮ ತೀರ್ಪು: ಆಡ್ವಾಣಿ, ಉಮಾ ಭಾರತಿ, ಜೋಶಿ ಕೋರ್ಟ್ ಗೆ ಗೈರು?
ಇದು ಹೇಗೆಂದರೆ, ಆ ದೇಶದೊಂದಿಗೆ ನಮ್ಮ ಬಾಂಧವ್ಯವನ್ನು ಉತ್ತಮವಾಗಿರಿಸಿಕೊಳ್ಳುವುದು ಮತ್ತು ಇದಕ್ಕಿಂತಲೂ ಮುಖ್ಯವಾಗಿ ಈ ಭಾಗದಲ್ಲಿರುವ ‘ಎಕ್ಸ್ ಕ್ಲೂಸಿವ್ ಎಕನಾಮಿಕ್ ಝೋನ್’ (ಅತಿವಿಶೇಷ ಆರ್ಥಿಕ ವಲಯ) (EEZ) ದಲ್ಲಿ ಚೀನಾ ಚಟುವಟಿಕೆಗಳ ಮೇಲೆ ಭಾರತಕ್ಕೆ ಕಣ್ಗಾವಲು ಇರಿಸಲೂ ಈ ಬೆಳವಣಿಗೆಯಿಂದ ಸಾಧ್ಯವಾಗಲಿದೆ.ಹೀಗಾಗಿ, ಮಾಲ್ಡೀವ್ಸ್ ಗೆ ಡೋರ್ನಿಯರ್ ವಿಮಾನವನ್ನು ಕೊಡುಗೆಯಾಗಿ ನೀಡಿರುವ ಭಾರತದ ರಾಜತಾಂತ್ರಿಕ ನಡೆ ಚೀನಾ ದೇಶದ ಕಣ್ಣು ಕೆಂಪಾಗಿಸುವ ಸಾಧ್ಯತೆಗಳಿವೆ. ಇದನ್ನೂ ಓದಿ: ಲಾಕ್‌ಡೌನ್ ಸಮಯದಲ್ಲಿ 1 ಗಂಟೆಗೆ 90 ಕೋಟಿ ರೂ. ಗಳಿಸಿದ ಮುಖೇಶ್ ಅಂಬಾನಿ! ಈ ಡೋರ್ನಿಯರ್ ಚಲಾಯಿಸಲು ಮತ್ತು ಇದರ ನಿರ್ವಹಣೆಗಾಗಿ ಪೈಲಟ್, ಏರ್ ಅಬ್ಸರ್ವರ್ ಗಳು ಮತ್ತು ತಂತ್ರಜ್ಞರು ಸೇರಿದಂತೆ ಭಾರತೀಯ ನೌಕಾದಳವು ಒಟ್ಟು ಏಳು ಜನ MDNF ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯನ್ನೂ ಸಹ ನೀಡಲಿದೆ. ಈ ಬೆಳವಣಿಗಳ ಕುರಿತಾಗಿ ಮಾಹಿತಿಯನ್ನು ಹೊಂದಿರುವ ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಈ ವಿವರಗಳನ್ನು ಹಿಂದೂಸ್ತಾನ್ ಟೈಮ್ಸ್ ವೆಬ್ ಸೈಟ್ ಜೊತೆ ಹಂಚಿಕೊಂಡಿದ್ದಾರೆ. ಈ ಬೆಳವಣಿಗೆಯ ಕುರಿತಾಗಿ ಟ್ವೀಟ್ ಒಂದನ್ನು ಮಾಡಿರುವ ಮಾಲ್ಡೀವ್ಸ್ ನಲ್ಲಿರುವ ಭಾರತೀಯ ರಾಯಭಾರಿ ಕಛೇರಿಯು, ‘ಎರಡೂ ಸರಕಾರಗಳ ನಡುವೆ 2016ರಲ್ಲಿ ಪ್ರಾರಂಭಗೊಂಡ ಒಪ್ಪಂದ ಹಾಗೂ ಚರ್ಚೆಯ ಪ್ರಕಾರ, ಡೋರ್ನಿಯರ್ ಬಂದಿಳಿದಿದೆ! ಈ ವಿಮಾನವು ಇಲ್ಲಿ, MNDF ನಿರ್ದೇಶನ ಹಾಗೂ ನಿಯಂತ್ರಣದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಹಾಗೂ ಜಂಟಿ EEZ ನಿಗಾ ಕಾರ್ಯಾಚರಣೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿದೆ. MNDFನ ಬಣ್ಣ ಹಾಗೂ ಧ್ವಜವನ್ನು ಹೊಂದಿರುವ ಈ ಡೋರ್ನಿಯರನ್ನು ಮಾಲ್ಡೀವ್ ಪೈಲಟ್ ಗಳೇ ಚಲಾಯಿಸಲಿದ್ದಾರೆ’ ಎಂದು ಆ ಟ್ವೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಬೈಂದೂರು: ಅಬ್ಬಾ..! ಹೇಗಿದೆ ನೋಡಿ ಅರ್ಧ ಟನ್ ತೂಕ, 20 ಅಡಿ ಉದ್ದದ ‘ದೈತ್ಯ’ ಹೆಬ್ಬಾವು!