Advertisement

23 ವರ್ಷಗಳ ಸುದೀರ್ಘ‌ ಪಯಣ ಅಂತ್ಯ: ಮಾಜಿ ನಾಯಕಿ ರುಮೇಲಿ ಧರ್‌ ಕ್ರಿಕೆಟ್‌ ವಿದಾಯ

11:29 PM Jun 22, 2022 | Team Udayavani |

ಕೋಲ್ಕತಾ: ಭಾರತೀಯ ವನಿತಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ, ಆಲ್‌ರೌಂಡರ್‌ ರುಮೇಲಿ ಧರ್‌ ಎಲ್ಲ ಮಾದರಿಯ ಕ್ರಿಕೆಟಿಗೆ ಬುಧವಾರ ಗುಡ್‌ಬೈ ಹೇಳಿದರು.

Advertisement

38 ವರ್ಷದ ರುಮೇಲಿ ಧರ್‌ ಭಾರತದ ಪರ 4 ಟೆಸ್ಟ್‌, 78 ಏಕದಿನ ಹಾಗೂ 18 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. 2003ರಲ್ಲಿ ಇಂಗ್ಲೆಂಡ್‌ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆಗೈದಿದ್ದರು.

6 ವರ್ಷಗಳ ಸುದೀರ್ಘ‌ ವಿರಾಮದ ಬಳಿಕ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪುನರಾಗಮನ ಮಾಡಿ ಸುದ್ದಿಯಾಗಿದ್ದರು. ಅಂದು ಗಾಯಾಳು ಜೂಲನ್‌ ಗೋಸ್ವಾಮಿ ಬದಲು ಭಾರತ ತಂಡವನ್ನು ಪ್ರವೇಶಿಸಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದರು. 2005ರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ಫೈನಲ್‌ ತಲುಪುವಲ್ಲಿ ರುಮೇಲಿ ಧರ್‌ ವಹಿಸಿದ ಪಾತ್ರ ಅಮೋಘವಾಗಿತ್ತು.

ಏರಿಳಿತಗಳಿಂದ ಕೂಡಿದ ಯಾನ
“ಪಶ್ಚಿಮ ಬಂಗಾಲದ ಶ್ಯಾಮ್‌ನಗರ್‌ನಿಂದ ಆರಂಭ ಗೊಂಡ ನನ್ನ 23 ವರ್ಷಗಳ ಕ್ರಿಕೆಟ್‌ ಪ್ರಯಾಣ ಕೊನೆಗೊಳ್ಳುತ್ತಿದೆ. ಎಲ್ಲ ಮಾದರಿಯ ಕ್ರಿಕೆಟಿಗೂ ನಾನು ವಿದಾಯ ಹೇಳುತ್ತಿದ್ದೇನೆ. ಇದೊಂದು ಏರಿಳಿತಗಳಿಂದ ಕೂಡಿದ ಯಾನವಾಗಿತ್ತು. 2005ರ ವಿಶ್ವಕಪ್‌ ಫೈನಲ್‌ನಲ್ಲಿ ಆಡಿದ್ದು, ಭಾರತ ತಂಡವನ್ನು ಮುನ್ನಡೆಸಿದ್ದು ನನ್ನ ಕ್ರಿಕೆಟ್‌ ಬದುಕಿನ ಸ್ಮರಣೀಯ ಕ್ಷಣ. ಆಗಾಗ ಗಾಯಗಳ ಸಮಸ್ಯೆಗೆ ಸಿಲುಕಿದೆ. ಬಲಿಷ್ಠವಾಗಿಯೇ ಪುನರಾಗಮನ ಸಾರಿದೆ. ಬಿಸಿಸಿಐ, ನನ್ನ ಕುಟುಂಬ, ನಾನು ಪ್ರತಿನಿಧಿಸಿದ ತಂಡಗಳ ಎಲ್ಲ ಸದಸ್ಯರಿಗೂ ಕೃತಜ್ಞತೆಗಳು’ ಎಂಬುದಾಗಿ ರುಮೇಲಿ ಧರ್‌ ಹೇಳಿದ್ದಾರೆ.

ದೇಶಿ ಕ್ರಿಕೆಟ್‌ನಲ್ಲಿ ಬಂಗಾಲ, ರೈಲ್ವೇಸ್‌, ಏರ್‌ ಇಂಡಿಯಾ, ದಿಲ್ಲಿ, ರಾಜಸ್ಥಾನ, ಅಸ್ಸಾಮ್‌, ಇಂಡಿಯಾ ರೆಡ್‌ ಮತ್ತು ಅಂಡರ್‌-21 ತಂಡಗಳನ್ನು ರುಮೇಲಿ ಧರ್‌ ಪ್ರತಿನಿಧಿಸಿದ್ದಾರೆ. ಜತೆಗೆ ಏಷ್ಯಾ ವನಿತಾ ಇಲೆವೆನ್‌ ಪರವಾಗಿಯೂ ಆಡಿದ್ದಾರೆ.

Advertisement

ಬಲಗೈ ಬ್ಯಾಟರ್‌ ಹಾಗೂ ಮಧ್ಯಮ ವೇಗಿಯಾಗಿದ್ದ ರುಮೇಲಿ ಧರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 236 ರನ್‌ ಹಾಗೂ 8 ವಿಕೆಟ್‌; ಏಕದಿನದಲ್ಲಿ 961 ರನ್‌ ಮತ್ತು 63 ವಿಕೆಟ್‌; ಟಿ20ಯಲ್ಲಿ 131 ರನ್‌ ಹಾಗೂ 13 ವಿಕೆಟ್‌ ಸಂಪಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next