ದುಬೈ: ಮುಂಬರುವ ಟಿ20 ವಿಶ್ವಕಪ್ ನ ಬಗ್ಗೆ ಮಹತ್ವದ ಮಾಹಿತಿಯನ್ನು ಇಂದು ಐಸಿಸಿ ನೀಡಿದೆ. ಕೋವಿಡ್ ಕಾರಣದಿಂದ ಭಾರತದಲ್ಲಿ ನಡೆಯಬೇಕಿದ್ದ ವಿಶ್ವಕಪ್ ಕೂಟ ಈ ಬಾರಿ ಯುಎಇ ಮತ್ತು ಒಮನ್ ನಲ್ಲಿ ನಡೆಯುತ್ತಿದೆ.
ಈ ಬಾರಿ ಎರಡು ಗುಂಪುಗಳ ಸೂಪರ್ 12 ಮಾದರಿಯಲ್ಲಿ ಕೂಟ ನಡೆಯಲಿದೆ. ಆದರೆ ವಿಶೇಷವೆಂದರೆ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹೀಗಾಗಿ ಲೀಗ್ ಹಂತದಲ್ಲಿಯೇ ಭಾರತ- ಪಾಕಿಸ್ಥಾನ ಪಂದ್ಯ ನಡೆಯಲಿದೆ.
ಎ ಗುಂಪಿನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸದ್ಯ ಸ್ಥಾನ ಪಡೆದಿದೆ. ಉಳಿದೆರಡು ಸ್ಥಾನಗಳಿಗೆ ಕ್ವಾಲಿಫೈಯರ್ ಗ್ರೂಪ್ ಎ ವಿನ್ನರ್ ಮತ್ತು ಗ್ರೂಪ್ ಬಿ ರನ್ನರ್ಸ್ ಪ್ರವೇಶ ಪಡೆಯಲಿದೆ.
ಇದನ್ನೂ ಓದಿ:ದರ್ಶನ್- ಇಂದ್ರಜಿತ್ ಪ್ರಕರಣದಲ್ಲಿ ನನ್ನ ಹೆಸರು ತಳಕು ಹಾಕುವ ಕೆಲಸ ಮಾಡಬೇಡಿ: ಕುಮಾರಸ್ವಾಮಿ
ಮತ್ತೊಂದು ಗ್ರೂಪ್ ನಲ್ಲಿ ಭಾರತ, ನ್ಯೂಜಿಲ್ಯಾಂಡ್, ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ ತಂಡಗಳು ಇದೀಗಲೇ ಸ್ಥಾನ ಪಡೆದಿದೆ. ಉಳಿದೆರಡು ಸ್ಥಾನಗಳಿಗೆ ಕ್ವಾಲಿಫೈಯರ್ ಗ್ರೂಪ್ ಎ ನ ರನ್ನರ್ ಮತ್ತು ಗ್ರೂಪ್ ಬಿ ಯ ವಿನ್ನರ್ ಪ್ರವೇಶ ಪಡೆಯಲಿದೆ.
ಅಕ್ಟೋಬರ್ 17ರಂದು ಟಿ20 ವಿಶ್ವಕಪ್ ಆರಂಭವಾಗಲಿದೆ. ನವೆಂಬರ್ 14ರಂದು ಫೈನಲ್ ಪಂದ್ಯ ನಡೆಯಲಿದೆ.