Advertisement

ಯಾವುದೇ ಪ್ರಧಾನಿ ಭಾರತ-ಪಾಕ್‌ ವಿಷಯವನ್ನು ವೈಯಕ್ತಿಕ ಲಾಭಕ್ಕೆ ಬಳಸಿಲ್ಲ: HDK

09:25 AM Apr 21, 2019 | Sathish malya |

ಬೆಂಗಳೂರು : ‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಭಾರತ-ಪಾಕ್‌ ಪರಿಸ್ಥಿತಿಯನ್ನು ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

Advertisement

‘ಮೋದಿ ತಮ್ಮ ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ಭಾರತ-ಪಾಕ್‌ ವಿಷಯವನ್ನು ಉಲ್ಲೇಖೀಸಿ ಮಾತನಾಡುವುದು ತಪ್ಪು. ಅನೇಕ ಪ್ರಧಾನಿಗಳು ಈ ದೇಶವನ್ನು ಆಳಿದ್ದಾರೆ; ಅನೇಕ ಬಾರಿ ಭಾರತ – ಪಾಕ್‌ ಸಂಘರ್ಷ ನಡೆದಿವೆ. ಆದರೆ ಈ ಹಿಂದಿನ ಯಾವುದೇ ಪ್ರಧಾನಿ ತಮ್ಮ ವೈಯಕ್ತಿಕ ಲಾಭಕ್ಕಾಗಿ ಆ ವಿಷಯವನ್ನು ತಮ್ಮ ಭಾಷಣದ ಬಂಡವಾಳವಾಗಿ ಮಾಡಿಕೊಂಡಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

‘ಪ್ರಧಾನಿ ಮೋದಿ ಅವರು ತಮ್ಮ ಚುನಾವಣಾ ಭಾಷಣದಲ್ಲಿ ಪದೇ ಪದೇ ಬಾಲಾಕೋಟ್‌ ವಾಯು ದಾಳಿಯನ್ನು ಉಲ್ಲೇಖೀಸುತ್ತಾರೆ ಮತ್ತು ಆ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ತಾನೇ ಖುದ್ದು ಪಾಕ್‌ ಗಡಿಗೆ ಹೋಗಿ ಬಾಂಬ್‌ ಹಾಕಿ ಬಂದವರಂತೆ ಅವರು ಮಾತನಾಡುತ್ತಾರೆ. ನಿಜಕ್ಕಾದರೆ ಭಾರತ ಮತ್ತು ಪಾಕಿಸ್ಥಾನ ನಡುವೆ ಯಾವುದೇ ಸಂಘರ್ಷ, ಕದನ ಇಲ್ಲ; ದೇಶದ ಒಳಗೂ ಯಾವುದೇ ಬಾಂಬ್‌ ದಾಳಿ ನಡೆದಿಲ್ಲ; ಅಂಥದ್ದೇನೂ ಆಗಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

‘ನನ್ನ ತಂದೆ ಎಚ್‌ ಡಿ ದೇವೇಗೌಡ ಅವರು 1995ರಲ್ಲಿ 10 ತಿಂಗಳ ಕಾಲ ದೇಶದ ಪ್ರಧಾನಿಯಾಗಿದ್ದಾಗ ಈ ದೇಶದಲ್ಲಿ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ನಡೆದಿದ್ದವಾ ? ಭಾರತ-ಪಾಕ್‌ ಗಡಿಯಲ್ಲಿ ಅಂಥದ್ದೇನಾದರೂ ನಡೆದಿತ್ತಾ ? ನನ್ನ ತಂದೆ ಪ್ರಧಾನಿಯಾಗಿದ್ದಾಗ ಇಡಿಯ ದೇಶ ಶಾಂತಿಯಿಂದಿತ್ತು’ ಎಂದು ಕುಮಾರಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next