Advertisement

ಭಾರತ-ಪಾಕ್‌ NSAಗಳ ಗುಪ್ತ ಮಾತುಕತೆ?

10:20 AM Jan 02, 2018 | Team Udayavani |

ಇಸ್ಲಾಮಾಬಾದ್‌: ಭಾರತ ಮತ್ತು ಪಾಕಿಸ್ಥಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಥಾಯ್ಲೆಂಡ್‌ನ‌ಲ್ಲಿ ಇತ್ತೀಚೆಗೆ ರಹಸ್ಯವಾಗಿ ಭೇಟಿಯಾಗಿದ್ದರು ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಆದರೆ ಈ ಬಗ್ಗೆ ಅಧಿಕೃತವಾಗಿಯಾಗಲೀ, ಅನಧಿಕೃತವಾಗಿಯಾಗಲೀ ಉಭಯ ದೇಶಗಳು ಯಾವುದೇ ಹೇಳಿಕೆ ನೀಡಿಲ್ಲ. ಇವರ ಭೇಟಿ ಕೇವಲ ಸ್ನೇಹಯುತ ಮತ್ತು ಧನಾತ್ಮಕ ದೃಷ್ಟಿಕೋನದ್ದಾಗಿತ್ತು. ಪಾಕಿಸ್ಥಾನದ ಎನ್‌ಎಸ್‌ಎ ನಾಸರ್‌ ಖಾನ್‌ ಜುನೇಜಾ ಹಾಗೂ ಭಾರತದ ಎನ್‌ಎಸ್‌ಎ ಅಜಿತ್‌ ದೋವಲ್‌ ಭೇಟಿ ಮಾಡಿದ್ದರು ಎಂದು ಪಾಕಿಸ್ಥಾನದ ಪತ್ರಿಕೆ ಡಾನ್‌ ವರದಿ ಮಾಡಿದೆ. ಈ ಹಿಂದೆ 2015ರ ಡಿಸೆಂಬರ್‌ನಲ್ಲೂ ಉಭಯ ದೇಶಗಳ ಎನ್‌ಎಸ್‌ಎಗಳು ಬ್ಯಾಂಕಾಕ್‌ನಲ್ಲಿ ಭೇಟಿಯಾಗಿದ್ದರು. ಈ ವಿಷಯದ ಬಗ್ಗೆ ಈವರೆಗೂ ಯಾವುದೇ ವಿವರಗಳು ಬಹಿರಂಗಗೊಂಡಿಲ್ಲ. ಪಾಕಿಸ್ಥಾನದಲ್ಲಿ ಜಾಧವ್‌ರನ್ನು ಅವರ ಪತ್ನಿ ಹಾಗೂ ತಾಯಿ ಭೇಟಿ ಮಾಡಿದ ಎರಡು ದಿನಗಳ ಬಳಿಕ ಈ ಸಭೆ ನಡೆದಿದೆ ಎನ್ನಲಾಗಿದೆ.

Advertisement

ಸಯೀದ್‌ ಆಸ್ತಿ ಜಪ್ತಿ?: ಪಾಕ್‌ನಲ್ಲಿ ಸ್ವಂತ ಪಕ್ಷ ಸ್ಥಾಪಿ ಸಲು ಮುಂದಾಗಿರುವ ಜೆಯುಡಿ ಉಗ್ರ ಹಫೀಜ್‌ ಸಯೀದ್‌ನ ಸಂಘಟನೆ ಹಾಗೂ ಆಸ್ತಿ ಪಾಸ್ತಿ ಮುಟ್ಟುಗೋಲು ಹಾಕಲು ಪಾಕಿಸ್ಥಾನ ಸರಕಾರ ಚಿಂತನೆ ನಡೆಸಿದೆ. ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡ ಕೆಲವು ಅಧಿಕಾರಿಗಳೇ ಈ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next