Advertisement

12 ಮಂದಿ ವನಿತಾ ಫುಟ್ಬಾಲಿಗರಿಗೆ ಕೋವಿಡ್‌ ಪಾಸಿಟಿವ್‌

12:09 AM Jan 24, 2022 | Team Udayavani |

ನವಿ ಮುಂಬಯಿ: ಆತಿಥೇಯ ಭಾರತ ಫುಟ್ ಬಾಲ್‌ ತಂಡದ 12 ಮಂದಿ ಆಟಗಾರ್ತಿಯರಿಗೆ ಕೊರೊನಾ ಪಾಸಿಟಿವ್‌ ಕಂಡುಬಂದ ಹಿನ್ನೆಲೆಯಲ್ಲಿ ಚೈನೀಸ್‌ ತೈಪೆ ವಿರುದ್ಧ ರವಿವಾರ ನಡೆಯಬೇಕಿದ್ದ ಏಶ್ಯನ್‌ ಕಪ್‌ ಪಂದ್ಯವನ್ನು ರದ್ದುಗೊಳಿಸಲಾಯಿತು.

Advertisement

“ತಂಡದಲ್ಲಿ ಸಾಕಷ್ಟು ಕೋವಿಡ್‌ ಪ್ರಕರಣಗಳು ಕಂಡುಬಂದಿದ್ದು, ಕನಿಷ್ಠ 13 ಆಟಗಾರ್ತಿಯರ ಲಭ್ಯತೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಚೈನೀಸ್‌ ತೈಪೆ ಎದುರಿನ ಗ್ರೂಪ್‌ ಎ ಪಂದ್ಯವನ್ನು ರದ್ದುಗೊಳಿಸಲಾಯಿತು’ ಎಂಬು ದಾಗಿ ಎಎಫ್ ಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಈ ಬೆಳವಣಿಗೆಯಿಂದ ಭಾರತದ ಕ್ವಾರ್ಟರ್‌ ಫೈನಲ್‌ ಪ್ರವೇಶ ಸಾಧ್ಯತೆ ದೂರವಾಗಿದೆ. ಇರಾನ್‌ ಎದುರಿನ ಮೊದಲ ಪಂದ್ಯದ ಗೋಲಿಲ್ಲದೆ ಡ್ರಾಗೊಂಡಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next