Advertisement

India Open Super 750 Badminton: ಪ್ರಣಯ್‌, ಸಾತ್ವಿಕ್‌-ಚಿರಾಗ್‌ ಕ್ವಾರ್ಟರ್‌ ಫೈನಲಿಗೆ

11:27 PM Jan 18, 2024 | Team Udayavani |

ಹೊಸದಿಲ್ಲಿ: ಸ್ಟಾರ್‌ ಶಟ್ಲರ್‌ ಎಚ್‌.ಎಸ್‌. ಪ್ರಣಯ್‌ ಹಾಗೂ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್‌ ರಾಂಕಿ ರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಇಂಡಿಯಾ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಕೂಟದಲ್ಲಿ ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದ್ದಾರೆ.

Advertisement

ಪ್ರಣಯ್‌ ಅವರು ತನ್ನದೇ ದೇಶದ ಪ್ರಿಯಾಂಶು ರಾಜವತ್‌ ಅವರನ್ನು 20-22, 21-14, 21-14 ಗೇಮ್‌ಗಳಿಂದ ಉರುಳಿಸಿ ಮುನ್ನಡೆದರು. ಇದೇ ವೇಳೆ ವಿಶ್ವ ಚಾಂಪಿಯನ್‌ ಕುನ್ಲವುಟ್‌ ವಿಟಿರ್ಡ್ಸನ್‌ ಅವರು ಸೋತು ಆಘಾತಕ್ಕೆ ಒಳಗಾಗಿದ್ದಾರೆ. 22ರ ಹರೆಯದ ಹಾಲಿ ಚಾಂಪಿಯನ್‌ ಆಗಿರುವ ವಿಟಿರ್ಡ್ಸನ್‌ ಅವರು ಹಾಂಕಾಂಗ್‌ನ ಲೀ ಚ್ಯುಕ್‌ ಯು ಅವರ ಕೈಯಲ್ಲಿ ಸೋತು ಹೊರಬಿದ್ದರು. ವಿಶ್ವದ ನಾಲ್ಕನೇ ರ್‍ಯಾಂಕಿನ ಯಮಗುಚಿ ಮತ್ತು ಹಾಲಿ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಲಿ ಶಿಫೆಂಗ್‌ ಕೂಡ ಸೋಲನ್ನು ಕಂಡಿದ್ದಾರೆ.

ಯಮಗುಚಿ ಅವರನ್ನು ಥಾçಲಂಡಿನ ಬುಸಾನನ್‌ ಅವರು 21-11, 21-19 ಗೇಮ್‌ಗಳಿಂದ ಕೆಡಹಿದರೆ ಜಪಾನಿನ ಶ್ರೇಯಾಂಕ ರಹಿತ ಆಟಗಾರ್ತಿ ಕೊಕಿ ವಾಟನಾಬೆ ಅವರು ಚೀನದ ಮೂರನೇ ಶ್ರೇಯಾಂಕದ ಲಿ ಶಿ ಫೆಂಗ್‌ ಅವರನ್ನು ಉರುಳಿಸಿದ್ದರು.

ಕಳೆದ ವಾರ ನಡೆದ ಮಲೇಷ್ಯಾ ಓಪನ್‌ ಕೂಟದಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದಿದ್ದ ಸಾತ್ವಿಕ್‌-ಚಿರಾಗ್‌ ಅವರು ಚೈನೀಸ್‌ ತೈಪೆಯ ಲು ಚಿಂಗ್‌ ಯಾವೊ ಮತ್ತು ಯಾಂಗ್‌ ಪೊ ಹಾನ್‌ ಅವರನ್ನು 21-14, 21-15 ಗೇಮ್‌ಗಳಿಂದ ಸೋಲಿಸಿ ಮುನ್ನಡೆದರು. ಅವರಿಬ್ಬರು ಮುಂದಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ ಐದನೇ ಶ್ರೇಯಾಂಕದ ಕಿಮ್‌ ಆ್ಯಸ್ಟ್ರೆಪ್‌ ಮತ್ತು ಆ್ಯಂಡರ್ಸ ಸ್ಕಾರುಪ್‌ ರಸು¾ಸೆನ್‌ ಅವರನ್ನು ಎದುರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next