Advertisement

India Open Badminton: ತವರಿನ ಆಟಗಾರರಿಗೆ ಕಠಿನ ಡ್ರಾ

11:24 PM Dec 30, 2023 | Team Udayavani |

ಹೊಸದಿಲ್ಲಿ: “ಇಂಡಿಯಾ ಓಪನ್‌ ಸೂಪರ್‌ 750′ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಆತಿಥೇಯ ಭಾರತೀಯ ಆಟಗಾರರಿಗೆ ತುಸು ಕಠಿನ ಸ್ಪರ್ಧೆ ಎದುರಾಗಿದೆ. ಜ. 16ರಿಂದ 21ರ ತನಕ ನಡೆಯಲಿರುವ ಈ ಪಂದ್ಯಾವಳಿ ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆಯ ಹಿನ್ನೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ.

Advertisement

ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲೇ 2022ರ ಕಾಮನ್ವೆಲ್ತ್‌ ಗೇಮ್ಸ್‌ ಬಂಗಾರ ವಿಜೇತ ಲಕ್ಷ್ಯ ಸೇನ್‌ ಮತ್ತು ಪ್ರಿಯಾಂಶು ರಾಜಾವತ್‌ ಮುಖಾಮುಖೀ ಆಗಲಿದ್ದಾರೆ. 8ನೇ ಶ್ರೇಯಾಂಕದ ಎಚ್‌.ಎಸ್‌. ಪ್ರಣಯ್‌ ಚೈನೀಸ್‌ ತೈಪೆಯ ಚೌ ಟೀನ್‌ ಚೆನ್‌ ವಿರುದ್ಧ ಸೆಣಸುವರು. ಈ ಪಂದ್ಯಗಳಲ್ಲಿ ಗೆದ್ದವರು ದ್ವಿತೀಯ ಸುತ್ತಿನಲ್ಲಿ ಎದುರಾಗಲಿದ್ದಾರೆ.

ಮಾಜಿ ಚಾಂಪಿಯನ್‌, ಪ್ರಸ್ತುತ 24ನೇ ರ್‍ಯಾಂಕಿಂಗ್‌ ಹೊಂದಿರುವ ಕೆ. ಶ್ರೀಕಾಂತ್‌ ಹಾಂಕಾಂಗ್‌ನ ಲೀ ಚೂಕ್‌ ವ್ಯೂ ವಿರುದ್ಧ ಆಡುವರು. ಮುಂದುವರಿದರೆ ಹಾಲಿ ಚಾಂಪಿಯನ್‌, ಥಾಯ್ಲೆಂಡ್‌ನ‌ ಕುನÉವುತ್‌ ವಿದಿತ್ಸಣ್‌ì ವಿರುದ್ಧ ಆಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next