Advertisement

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಸಿಂಧು, ಸೈನಾ ದ್ವಿತೀಯ ಸುತ್ತಿಗೆ

07:57 AM Mar 31, 2017 | Team Udayavani |

ಹೊಸದಿಲ್ಲಿ: ಒಲಿಂಪಿಕ್‌ ಪದಕ ವಿಜೇತರಾದ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್‌ ಅವರು ಸುಲಭ ಗೆಲುವಿನೊಂದಿಗೆ ಇಂಡಿಯಾ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಕೂಟದ ದ್ವಿತೀಯ ಸುತ್ತಿಗೇರಿದ್ದಾರೆ.

Advertisement

ರಿಯೋ ಒಲಿಂಪಿಕ್ಸ್‌ ಬೆಳ್ಳಿ ವಿಜೇತೆ ಸಿಂಧು ತನ್ನ ದೇಶದವರೇ ಆದ ಆರುಂಧತಿ ಪಂತವಾನೆ ಅವರನ್ನು 21-17, 21-6 ಗೇಮ್‌ಗಳಿಂದ ಕೆಡಹಿದರೆ ಸೈನಾ ಅವರು ಚೈನೀಸ್‌ ತೈಪೆಯ ಚಿಯಾ ಹಸಿನ್‌ ಲೀ ಅವರನ್ನು 21-10, 21-17 ಗೇಮ್‌ಗಳಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಸಿಂಧು ಶ್ರೇಯಾಂಕರಹಿತ ಆಟಗಾರ್ತಿ ಜಪಾನಿನ ಸಯೀನಾ ಕಾವಕಾಮಿ ಅವರನ್ನು ಎದುರಿಸಲಿದ್ದರೆ ಸೈನಾ ಥಾçಲಂಡಿನ ಪೋರ್ನ್ಪಾವೀ ಚೋಚುವಾಂಗ್‌ ಅವರನ್ನು ಎದುರಿಸಲಿದ್ದಾರೆ.

ಇದೇ ವೇಳೆ  ಪುರುಷರ ಸಿಂಗಲ್ಸ್‌ನಲ್ಲಿ 2015ರ ಚಾಂಪಿಯನ್‌ ಕಿದಂಬಿ ಶ್ರೀಕಾಂತ್‌ ಮೊದಲ ಗೇಮ್‌ನಲ್ಲಿ 1-8 ಹಿನ್ನಡೆ ಅನುಭವಿಸಿದ್ದರೂ ಚೀನದ ಝಾವೊ ಜನ್‌ಪೆಂಗ್‌ ಅವರನ್ನು 21-19, 21-16 ಗೇಮ್‌ಗಳಿಂದ ಸೋಲಿಸಲು ಯಶಸ್ವಿಯಾದರು. ಅವರು ಮುಂದಿನ ಸುತ್ತಿನಲ್ಲಿ ಒಲಿಂಪಿಕ್‌ ಕಂಚು ವಿಜೇತ ವಿಕ್ಟರ್‌ ಆ್ಯಕ್ಸೆಲ್‌ಸೆನ್‌ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಅಜಯ್‌ ಜಯರಾಮನ್‌ ಕಠಿನ ಹೋರಾಟದಲ್ಲಿ ಸೋತು ಹೊರಬಿದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next