Advertisement

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮತ್ತೊಮ್ಮೆ ಚೀನಗೆ ತರಾಟೆ ತೆಗೆದುಕೊಂಡ ಭಾರತ

02:54 PM Aug 23, 2022 | Team Udayavani |

ವಿಶ್ವಸಂಸ್ಥೆ: ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಚೀನ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಆರೋಪಿಸಿದೆ.

Advertisement

ಸಭೆಯಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ ರುಚಿರಾ ಕಾಂಭೋಜ್‌ ಚೀನದ ಹೆಸರೆತ್ತದೆ ಹಲವು ಉಲ್ಲೇಖಗಳನ್ನು ಮಾಡಿ, ಕೆಲವೊಂದು ದೇಶಗಳು ಮತ್ತೊಂದು ದೇಶಗಳ ವ್ಯವಸ್ಥೆ ಮತ್ತು ಸಾರ್ವಭೌಮತ್ವವನ್ನು ಉಲ್ಲಂಘಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಹೀಗಾಗಿ, ಜಗತ್ತಿನ ದೇಶಗಳಿಗೆ ಇರುವ ಸಾಮಾನ್ಯ ಭದ್ರತೆ ಎಂಬುದಕ್ಕೆ ಏನು ಅರ್ಥವಿದೆ ಎಂದು ಪ್ರಶ್ನಿಸಿದ್ದಾರೆ.

ಚೀನದ ಕೋರಿಕೆಯ ಮೇರೆಗೆ ನಡೆದ ಸಭೆಯಲ್ಲಿಯೇ ಆ ದೇಶವನ್ನು ತರಾಟೆಗೆ ತೆಗೆದುಕೊಂಡದ್ದು ಗಮನಾರ್ಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next