Advertisement

ಬೀಫ್ ರಫ್ತಿನಲ್ಲಿ ಭಾರತ ನಂ.1 ಅನ್ನೋದು ಸುಳ್ಳು; ನಿರ್ಮಲಾ ಸೀತಾರಾಮನ್

03:47 PM Jun 16, 2017 | Sharanya Alva |

ಉಡುಪಿ: ಬೀಫ್ (ಗೋ ಮಾಂಸ) ರಫ್ತಿನಲ್ಲಿ ಭಾರತ ನಂಬರ್ ವನ್ ದೇಶ ಎಂಬುದು ಸುಳ್ಳು ಸುದ್ದಿ ಎಂಬುದಾಗಿ ಕೇಂದ್ರ ಕೈಗಾರಿಕಾ ಮತ್ತು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Advertisement

ಶುಕ್ರವಾರ ನಗರಕ್ಕೆ ಭೇಟಿ ಕೊಟ್ಟಿದ್ದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತ, ಬೀಫ್ ರಫ್ತಾಗಿದೆ ಅನ್ನೋದು ತಪ್ಪು ಕಲ್ಪನೆ. ಬೀಫ್ ಅಂದರೆ ದನದ ಮಾಂಸ. ಅದನ್ನು ರಫ್ತು ಮಾಡೋದು ನಿಷೇಧವಾಗಿದೆ. ಭಾರತದಿಂದ ರಫ್ತಾಗೋದು ಖಾರ ಬೀಫ್ ಎಂದು ಸ್ಪಷ್ಟನೆ ನೀಡಿದ್ದಾರೆ.

ಬೀಫ್ ಗೂ ಖಾರ ಬೀಫ್ ಗೂ ತುಂಬಾ ವ್ಯತ್ಯಾಸವಿದೆ ಎಂದ ನಿರ್ಮಲಾ ಸೀತಾರಾಮನ್, ಎಮ್ಮೆ ಮತ್ತು ಕೋಣದ ಮಾಂಸವನ್ನು ಖಾರ ಬೀಫ್ ಎಂದು ಹೇಳುತ್ತಾರೆ. ಆದರೆ ಕೆಲವರು ಖಾರ ಪದವನ್ನು ಬಳಸದೆ ಕೇವಲ ಬೀಫ್ ಪದವನ್ನು ಬಳಸುತ್ತಿದ್ದಾರೆ. ಇದರಿಂದಾಗಿ ತಪ್ಪು ಮಾಹಿತಿ ಕೊಟ್ಟಂತೆ ಆಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next