Advertisement

2047ಕ್ಕೆ ಭಾರತ ವಿಶ್ವಕ್ಕೆ ನಂ.1: ಉಪರಾಷ್ಟ್ರಪತಿ ಜಗದೀಪ ಧನಕರ್

07:20 PM Mar 01, 2024 | Team Udayavani |

ಧಾರವಾಡ : ಶತಮಾನಗಳ ಹಿಂದೆ ವಿಶ್ವಕ್ಕೆ ಮಾದರಿಯಾಗಿದ್ದ ಭಾರತ ಇದೀಗ ಮತ್ತೆ ಪುಟಿದೇಳಲಿದ್ದು, 2047ಕ್ಕೆ ಅಭಿವೃದ್ಧಿ ಹೊಂದಿದ ವಿಶ್ವದ ನಂ.1 ರಾಷ್ಟ್ರವಾಗಲಿದೆ ಎಂದು ಉಪರಾಷ್ಟ್ರಪತಿ ಜಗದೀಪ ಧನಕರ್ ಹೇಳಿದರು.

Advertisement

ನಗರದ ಧಾರವಾಡ ಐಐಟಿ ಕ್ಯಾಂಪಸ್‌ನಲ್ಲಿ ಸೆಂಟ್ರಲ್ ಲರ್ನಿಂಗ್ ಥಿಯೇಟರ್(ಸಿಎಲ್‌ಟಿ), ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ(ಕೆಆರ್‌ಡಿಸಿ), ಎರಡು ಹೊಸ ಪ್ರವೇಶ ದ್ವಾರಗಳನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಭಾರತ ಭವ್ಯತೆ ಕಡೆಗೆ ಸಾಗುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕಳೆದ ಹತ್ತು ವರ್ಷಗಳಲ್ಲಿ ರಕ್ಷಣೆ, ಬಾಹ್ಯಾಕಾಶ, ಮಹಿಳಾ ಸಬಲೀಕರಣ, ಹೊಸ ಅವಿಷ್ಕಾರಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಮೈ ಕೊಡವಿ ಎದ್ದು ನಿಂತಿದೆ. ಏನೇ ಅಡೆತಡೆಗಳು ಬಂದರೂ ಸುಸ್ಥಿರವಾಗಿ ಅಭಿವೃದ್ಧಿಯತ್ತ ಸಾಗುತ್ತಿರುವ ಭಾರತ ಖಂಡಿತವಾಗಿಯೂ 2047ಕ್ಕೆ ಅಂದರೆ ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ಖಂಡಿತವಾಗಿಯೂ ವಿಶ್ವದ ನಂ.1 ಭವ್ಯ ರಾಷ್ಟ್ರವಾಗಿ ಭಾರತ ತಲೆಎತ್ತಿ ನಿಲ್ಲಲಿದೆ ಎಂದರು.

2030 ಕ್ಕೆ ನಂ.3 ಆರ್ಥಿಕ ಶಕ್ತಿ
ಸದ್ಯ ವಿಶ್ವವೇ ಭಾರತದತ್ತ ಬೆರಗುಗಣ್ಣನಿಂದ ನೊಡುತ್ತಿದೆ. ಇಡೀ ವಿಶ್ವವೇ ನಮ್ಮ ತಾಂತ್ರಿಕತೆ ಎದುರು ನೋಡುತ್ತಿದೆ. ಭಾರತದ ಚಂದ್ರಯಾನ ಯಶಸ್ವಿಗೆ ಜಗತ್ತಿನ ಇತಿಹಾಸದಲ್ಲಿ ದಾಖಲಾಗಿದೆ. ಜಗತ್ತಿನ ಆರ್ಥಿಕತೆಯಲ್ಲಿ ಭಾರತ 5 ನೇ ಸ್ಥಾನದಲ್ಲಿದ್ದು,2030 ಕ್ಕೆ ಮೊದಲ ಮೂರು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವುದು ನಿಶ್ಚಿತ.ಭಾರತ ಸರ್ಕಾರ ನವೀನ ತಂತ್ರಜ್ಞಾನ ಆವಿಷ್ಕಾರಕ್ಕೆ ಸಾಕಷ್ಟು ಆದ್ಯತೆ, ಪ್ರೋತ್ಸಾಹ ನೀಡುತ್ತಿದೆ. ಇಸ್ರೋ ಅವಕಾಶಗಳ ಬಾಗಿಲು ತೆರೆದಿದೆ. ಸೈಕಲ್ ಮೇಲೆ ಉಪಗ್ರಹ ಹೇರಿಕೊಂಡು ಹೋದ ದೇಶದಲ್ಲಿ ಇಂದು ಚಂದ್ರ ಮತ್ತು ಸೂರ್ಯರತ್ತ ಸಾಗುತ್ತಿದ್ದೇವೆ. ಅಷ್ಟೇಯಲ್ಲ, ಗಗನಯಾನಕ್ಕೂ ನಾಲ್ವರನ್ನು ಭಾರತ ಸಜ್ಜು ಮಾಡಿದ್ದು ವಿಶ್ವಕ್ಕೆ ಭಾರತ ಎನು ಎಂಬುದನ್ನು ತೋರಿಸಿದಂತಾಗಿದೆ ಎಂದರು.

ಉತ್ತಮ ಭವಿಷ್ಯವಿದೆ
ಧಾರವಾಡ ಐಐಟಿ ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬಿದ ಉಪರಾಷ್ಟ್ರಪತಿಗಳು, ಜೀವನದಲ್ಲಿ ವಿಫಲತೆಗೆ ಭಯಪಡುವ ಅಗತ್ಯ ಇಲ್ಲ. ನಮ್ಮ ಪ್ರಯತ್ನ ಎಂದಿಗೂ ಬಿಡಬಾರದರು. ತಂತ್ರಜ್ಞಾನ ಯುಗದಲ್ಲಿ ಪದವೀಧರರ ಅಗತ್ಯ ಬಹಳಷ್ಟಿದೆ. ಅವಕಾಶಗಳು ಸಹ ವಿಫಲವಾಗಿವೆ. ಹೀಗಾಗಿ ಅವುಗಳನ್ನು ಸದ್ಬಳಕೆ ಮಾಡಿಕೊಂಡು, ದೇಶಕ್ಕೆ ಕೊಡುಗೆ ನೀಡಬೇಕುಛ ಮೂಲಕ ತಾಯ್ನಾಡಿನ ಋಣ ತೀರಿಸಲು ಹೇಳಿದರು.
ಧಾರವಾಡ ಐಐಟಿ ವಿಶ್ವಮಟ್ಟದ ಮೂಲಸೌಕರ್ಯ ಹೊಂದಿದೆ. ಮುಂದೊಂದು ದಿನ ಖಂಡಿತವಾಗಿಯೂ ಧಾರವಾಡ ಐಐಟಿ ದೇಶದ ಶ್ರೇಷ್ಠ ಐಐಟಿಯಾಗುವುದರಲ್ಲಿ ಸಂಶಯವಿಲ್ಲ ಎಂದರು.

Advertisement

ಭಾರತೀಯತೆಯೇ ವಿಶ್ವಾಸ
ಇನ್ನು ಭಾರತೀಯತೆಯೇ ಶ್ರೇಷ್ಠವಾಗಿದ್ದು ರಾಷ್ಟ್ರಧರ್ಮದಲ್ಲಿ ಎಲ್ಲರೂ ನಂಬಿಕೆ ಇಟ್ಟುಕೊಳ್ಳಬೇಕಾಗಿದೆ. ಇದರಿಂದ ರಾಷ್ಟ್ರವು ಉನ್ನತ ಸ್ಥಿತಿ ತಲುಪುವುದು ನಿಶ್ಚಿತ. ಆದರೆ ಇದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದು ಬೇಸರದ ಸಂಗತಿ. ಅದೇನಿದ್ದರೂ ಸರಿ ಯುವ ಪೀಳಿಗೆ ಮಾತ್ರ ರಾಷ್ಟ್ರಧರ್ಮ ಭಾರತೀಯತೆಯತ್ತ ಮುಖಮಾಡಬೇಕು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಐಐಟಿ ನಿರ್ದೇಶಕ ವೆಂಕಪ್ಪಯ್ಯ ದೇಸಾಯಿ, ಅಧ್ಯಾಪಕ ವೃಂದ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next