Advertisement

India ವಿಶ್ವ ಗುರು ಆಗಲು ವೇದಗಳು, ಸಂಸ್ಕೃತದ ಜ್ಞಾನ ಪೋಷಿಸುವ ಅಗತ್ಯವಿದೆ: RSS ಭಾಗವತ್

05:31 PM Apr 23, 2023 | Team Udayavani |

ಸಬರ್ ಕಾಂತ(ಗುಜರಾತ್‌) : ಭಾರತವು ‘ವಿಶ್ವ ಗುರು’ ಆಗಲು ವೇದಗಳ ಜ್ಞಾನ ಮತ್ತು ಸಂಸ್ಕೃತದ ಪ್ರಾಚೀನ ಭಾಷೆಯ ಜ್ಞಾನವನ್ನು ಪೋಷಿಸುವ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.

Advertisement

ಮೂಡೇಟಿ ಗ್ರಾಮದಲ್ಲಿ ಶ್ರೀ ಭಗವಾನ್ ಯಾಜ್ಞವಲ್ಕ್ಯ ವೇದತತ್ವಜ್ಞಾನ ಯೋಗಾಶ್ರಮ ಟ್ರಸ್ಟ್ ಆಯೋಜಿಸಿದ್ದ ‘ವೇದ ಸಂಸ್ಕೃತ ಜ್ಞಾನ ಗೌರವ ಸಮರಂಭ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಭಾಗವತ್, ವೇದಗಳ ಮೌಲ್ಯಗಳ ಆಧಾರದ ಮೇಲೆ ಭಾರತವನ್ನು ರಚಿಸಲಾಗಿದೆ.ಭಾರತೀಯ ಸಂಸ್ಕೃತಿಯು ಸಾಂಪ್ರದಾಯಿಕವಾಗಿಲ್ಲ ಆದರೆ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಏನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂದು ಹೇಳುವುದಿಲ್ಲ ಎಂದು ಹೇಳಿದ್ದಾರೆ.

“ಇಂದಿನ ಭಾರತವು ಬೆಳೆಯಬೇಕು ಆದರೆ ಅಧಿಕಾರವನ್ನು ಹೊಂದಿರುವ ಅಮೆರಿಕ, ಚೀನಾ ಮತ್ತು ರಷ್ಯಾದಂತೆ ಸೂಪರ್ ಪವರ್ ಆಗಬಾರದು. ಇಂದು ಜಗತ್ತನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಉತ್ತರ ನೀಡುವ ದೇಶವಾಗಿ ನಾವಿಂದು ಹೊರಹೊಮ್ಮಬೇಕು. ಸರಿಯಾದ ನಡತೆಯ ಮೂಲಕ ಜಗತ್ತಿಗೆ ಶಾಂತಿ, ಪ್ರೀತಿ ಮತ್ತು ಸಮೃದ್ಧಿಯ ಮಾರ್ಗವನ್ನು ತೋರಿಸುವ ದೇಶವಾಗಿ ನಾವು ಬದಲಾಗಬೇಕಾಗಿದೆ ಎಂದು ಭಾಗವತ್ ಹೇಳಿದರು.

ಭಾರತವು ‘ಧರ್ಮ’ ಪ್ರಚಾರ ಮಾಡುವ ನಂಬಿಕೆಯಿರುವ ದೇಶವಾಗಿದ್ದು, ಎಲ್ಲರನ್ನು ಒಂದುಗೂಡಿಸುವ ಮತ್ತು ವಿಶ್ವ ಗುರುವಾಗಲು, “ಗೆಲುವು ಎಂದರೆ ಧರ್ಮ ವಿಜಯ” ಎಂದರು.

“ವೇದಗಳ ಜ್ಞಾನ ಅಥವಾ ವೇದ ವಿಜ್ಞಾನ ಮತ್ತು ಸಂಸ್ಕೃತಿ ಯನ್ನು ಪೋಷಿಸುವುದು ಅವಶ್ಯಕ. ಈ ಎಲ್ಲಾ ಜ್ಞಾನವು ಸಂಸ್ಕೃತದಲ್ಲಿದೆ. ಆದ್ದರಿಂದ, ಸಂಸ್ಕೃತದ ಪ್ರಭಾವವನ್ನು ಹೊಂದಿರುವುದು ಅವಶ್ಯಕ. ನಮ್ಮ ಮಾತೃಭಾಷೆಯನ್ನು ಚೆನ್ನಾಗಿ ಮಾತನಾಡಲು ತಿಳಿದಿದ್ದರೆ, ನಾವು 40 ಪ್ರತಿಶತದಷ್ಟು ಸಂಸ್ಕೃತವನ್ನು ಕಲಿಯಬಹುದು, ”ಎಂದು ಅವರು ಪ್ರತಿಪಾದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next