Advertisement

ಭಾರತಕ್ಕೆ ಕಾನೂನಿನ ಪಾಠ ಕಲಿಸಬೇಕಾದ ಅಗತ್ಯವಿದೆ; ಚೀನಾ ಮಾಧ್ಯಮ

02:37 PM Jun 28, 2017 | Team Udayavani |

ನವದೆಹಲಿ/ಬೀಜಿಂಗ್: ಗಡಿ ವಿವಾದದ ವಿಚಾರದಲ್ಲಿ ಭಾರತ ಮತ್ತು ಚೀನಾ ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿರುವ ನಡುವೆಯೇ ಭಾರತ ಪುಂಡಾಟಿಕೆ ನಡೆಸುತ್ತಿದೆ ಎಂದು ದೂಷಿಸಿರುವ ಚೀನಾ ಸ್ವಾಮಿತ್ವದ ಮಾಧ್ಯಮ ಭಾರತಕ್ಕೆ ಕಾನೂನಿನ ಪಾಠ ಕಲಿಸಬೇಕಾದ ಅಗತ್ಯವಿದೆ ಎಂದು ಹೇಳುವ ಮೂಲಕ ಉದ್ಧಟತನ ತೋರಿದೆ.

Advertisement

ಚೀನಾ ಸ್ವಾಮಿತ್ವದ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಲೇಖನದಲ್ಲಿ, ತಂತ್ರ ಕೌಶಲ್ಯತೆಯಲ್ಲಿ ಪರಮೋಚ್ಛ ಎಂದು ಭಾರತೀಯರು ಭಾವಿಸಿಕೊಂಡಿದ್ದಾರೆ. ಭಾರತ ನಡೆ ಸೊಕ್ಕಿನದ್ದು ಯಾಕೆಂದರೆ ಅಮೆರಿಕಾ ಮತ್ತು ಪಾಶ್ಚಾತ್ಯ ದೇಶಗಳ ಇಚ್ಚೆಯೂ ಕೂಡಾ ಭಾರತ ಚೀನಾದ ಜೊತೆ ಸೆಡ್ಡು ಹೊಡೆಯಬೇಕು ಎಂಬುದಾಗಿದೆ ಎಂದು ಆರೋಪಿಸಿದೆ.

ಗಡಿ ಸಮಸ್ಯೆಯನ್ನು ವಿವಾದವನ್ನಾಗಿ ಮಾಡೋದನ್ನು ಚೀನಾ ತಪ್ಪಿಸಿದೆ. ಇಂತಹ ವಿವಾದಗಳನ್ನು ಚೀನಾದ ಅಧಿಕಾರಿಗಳು ತಳಮಟ್ಟದಲ್ಲಿಯೇ ಬಗೆಹರಿಸಲು ಯತ್ನಿಸಿದ್ದಾರೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next