Advertisement

ಭಾರತಕ್ಕೆ ವಿಜ್ಞಾನಿಗಳ ಅಗತ್ಯ ಹೆಚ್ಚಿದೆ

02:44 PM Jul 08, 2018 | Team Udayavani |

ಬೆಂಗಳೂರು: ಇಂದಿನ ಭಾರತಕ್ಕೆ ಮ್ಯಾನೇಜ್‌ಮೆಂಟ್‌ ಪದವೀಧರರಗಿಂತ ವಿಜ್ಞಾನಿಗಳ ಅಗತ್ಯತೆ ಹೆಚ್ಚಿದೆ ಎಂದು ಭಾರತ ರತ್ನ ಪ್ರೊ. ಸಿ.ಎನ್‌.ಆರ್‌.ರಾವ್‌ ಎಚ್ಚರಿಕೆ ಅಭಿಪ್ರಾಯಪಟ್ಟರು. ವಿಜ್ಞಾನದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ.

Advertisement

ಮೂಲ ವಿಜ್ಞಾನವನ್ನು ನಿರ್ಲಕ್ಷಿಸಿದರೆ ಆಪತ್ತು ಕಟ್ಟಿಟ್ಟ ಬುತ್ತಿ ನಗರದ ಟಿ.ದಾಸರಹಳ್ಳಿಯ ಸೌಂದರ್ಯ ಶಿಕ್ಷಣ ಸಂಸ್ಥೆಯ ಬೆಳ್ಳಿ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದ ವಿಜ್ಞಾನಿಗಳಲ್ಲಿ ಶೇ.90 ಮಂದಿ ಬಡತನದಿಂದ ಬಂದವರಿದ್ದಾರೆ. ಸಾಧಿಸಬೇಕೆಂಬ ಛಲ, ಹುಮ್ಮಸ್ಸು ಮತ್ತು ಶ್ರಮ ಅವರನ್ನು ಪ್ರಖ್ಯಾತರನ್ನಾಗಿಸಿದೆ. ವಿಜ್ಞಾನಿಗಳು ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೆ ಅನ್ವೇಷಣೆಯಲ್ಲಿ ತೊಡಗುತ್ತಾರೆ ಎಂದು ಹೇಳಿದರು.

ಮಕ್ಕಳನ್ನು ಇಂಜಿನಿಯರಿಂಗ್‌, ಮ್ಯಾನೇಜ್‌ಮೆಂಟ್‌ ಪದವಿಗೆ ಒತ್ತಾಯಪೂರ್ವಕವಾಗಿ ಕಳುಹಿಸದೆ ಅವರ ಆಯ್ಕೆಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಪಾಲಕರು, ಪೋಷಕರು ಅವಕಾಶ ಕಲ್ಪಿಸಬೇಕು. ಜಪಾನ್‌, ಚೀನಾ ಹಾಗೂ ಕೊರಿಯಾ ಜನರಂತೆ ನಾವೂ ಶ್ರಮ ಜೀವಿಗಳಾಗಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next