Advertisement

ಮುಕ್ತ ವ್ಯಾಪಾರಕ್ಕೆ ಭಾರತ- ಮಾಲ್ದೀವ್ಸ್‌ ಒಪ್ಪಂದ

01:22 AM May 27, 2024 | Team Udayavani |

ಹೊಸದಿಲ್ಲಿ: ಮಾಲ್ದೀವ್ಸ್‌ನೊಂದಿಗೆ ಭಾರತ ಮುಕ್ತ ವ್ಯಾಪಾರ ಒಪ್ಪಂದ ಮಾಡಿ ಕೊಳ್ಳಲು ಮುಂದಾಗಿದೆ ಎಂದು ಮಾಲ್ದೀವ್ಸ್‌ ಸಚಿವ ಮೊಹಮ್ಮದ್‌ ಸಾಯೀದ್‌ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅವರು, 2 ದೇಶಗಳ ವ್ಯಾಪಾರ ಒಪ್ಪಂದದ ಪ್ರಕ್ರಿಯೆ ನಡೆಯುತ್ತಿದೆ. ಜತೆಗೆ ವಿವಿಧ ರಾಷ್ಟ್ರಗಳೊಂದಿಗೂ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದನ್ನು ಕೆಲವು ಮಾಲ್ದೀವ್ಸ್‌ ಸಚಿವರು ಟೀಕಿಸಿದ್ದರು. ಜತೆಗೆ ಅಧ್ಯಕ್ಷ ಮುಯಿಜ್ಜು ಅವರ ಚೀನ ಪರ ನಿಲುವುಗಳಿಂದ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತ್ತು. ಈ ನಡು ವೆಯೂ ಭಾರತ ಮಾಲ್ದೀವ್ಸ್‌ ಸರಕಾರಕ್ಕೆ 415 ಕೋಟಿ ರೂ. ನೆರವು ಘೋಷಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next