Advertisement

ಭಾರತದಲ್ಲಿ 7,974 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಕೋವಿಡ್ ಸಂಖ್ಯೆ ಭಾರೀ ಇಳಿಕೆ

11:53 AM Dec 16, 2021 | Team Udayavani |

ನವದೆಹಲಿ:ಭಾರತದಲ್ಲಿ 24ಗಂಟೆಗಳ ಕಾಲ 7,974 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3,47,18,602ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ(ಡಿಸೆಂಬರ್ 16) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ:‘ಪರ್ಸೆಂಟೇಜ್’ ತನಿಖೆಯಾದರೆ ಕಾಂಗ್ರೆಸ್ ನವರೇ ಸಿಕ್ಕಿ ಬೀಳುತ್ತಾರೆ: ಸಚಿವ ಈಶ್ವರಪ್ಪ

24ಗಂಟೆಯಲ್ಲಿ 343 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದು, ದೇಶಾದ್ಯಂತ ಕೋವಿಡ್ ಸೋಂಕಿನಿಂದ ಈವರೆಗೆ 4,76,478 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶದಲ್ಲಿ ಹೇಳಿದೆ. ಕಳೆದ 49 ದಿನಗಳಿಂದ 15,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ವರದಿಯಾಗತ್ತಿದೆ.

ದೇಶದಲ್ಲಿ ಕೋವಿಡ್ 19 ಚೇತರಿಕೆ ಪ್ರಮಾಣ ಶೇ.98.38ರಷ್ಟಿದೆ. ಕಳೆದ 24ಗಂಟೆಗಳಲ್ಲಿ 317 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಒಟ್ಟು ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 87,245ಕ್ಕೆ ಇಳಿಕೆಯಾಗಿದೆ ಎಂದು ಅಂಕಿಅಂಶ ತಿಳಿಸಿದೆ. ಭಾರತದಲ್ಲಿ ಈವರೆಗೆ 135.25 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ವರದಿ ಹೇಳಿದೆ.

ಭಾರತದಲ್ಲಿ 82.08 ಕೋಟಿ ಮಂದಿ ಮೊದಲ ಕೋವಿಡ್ ಡೋಸ್ ಲಸಿಕೆ ತೆಗೆದುಕೊಂಡಿದ್ದು, 53.09 ಕೋಟಿ ಮಂದಿ ಎರಡು ಕೋವಿಡ್ ಲಸಿಕೆಯನ್ನು ತೆಗೆದುಕೊಂಡಿರುವುದಾಗಿ ಅಂಕಿಅಂಶದಲ್ಲಿ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next