Advertisement

ಆಜಾದ್‌ ಜಮ್ಮು ಕಾಶ್ಮೀರ ಸಂವಿಧಾನ ತಿದ್ದುಪಡಿ:ಪಾಕಿಗೆ ಭಾರತ ಪ್ರತಿಭಟನೆ

10:57 AM Jun 12, 2018 | Team Udayavani |

ಹೊಸದಿಲ್ಲಿ : 2018ರ ಆಜಾದ್‌ ಜಮ್ಮು ಕಾಶ್ಮೀರ ಸಂವಿಧಾನ ತಿದ್ದುಪಡಿ ಕಾಯಿದೆಯನ್ನು ಪಾಕ್‌ ಸರಕಾರ ಪಾಸ್‌ ಮಾಡಿದ ಬೆನ್ನಿಗೇ ಭಾರತ ಪಾಕ್‌ ಸರಕಾರದ ಈ ಕೃತ್ಯಕ್ಕೆ ಬಲವಾದ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ. 

Advertisement

ಕಾನೂನು ಬಾಹಿರವಾಗಿ ತನ್ನ ವಶದಲ್ಲಿ ಇರಿಸಿಕೊಂಡಿರುವ ಜಮ್ಮು  ಕಾಶ್ಮೀರದ ಎಲ್ಲ ಪ್ರದೇಶಗಳನ್ನು ತೆರವುಗೊಳಿಸಬೇಕೆಂದು ಭಾರತ ಪಾಕಿಸ್ಥಾನಕ್ಕೆ ಅತ್ಯಂತ ಕಟುವಾದ ಶಬ್ದಗಳಲ್ಲಿ ತಿಳಿಸಿದೆ.

ಪಾಕಿಸ್ಥಾನವು ಆಜಾದ್‌ ಜಮ್ಮು ಮತ್ತು ಕಾಶ್ಮೀರ ಎಂದರೆ ಕರೆಯುವ ಸಂಪೂರ್ಣ ಭೂಭಾಗವು ಇಡಿಯ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸೇರಿದ್ದಾಗಿದ್ದು  1947ರ ಸೇರ್ಪಡೆಯಿಂದಾಗಿ ಭಾರತದ ಅವಿಭಾಜ್ಯ ಅಂಗವಾಗಿದೆ. ಹಾಗಿರುವಾಗ ಪಾಕಿಸ್ಥಾನ ಪಾಸು ಮಾಡಿರುವ ಆಜಾದ್‌ ಜಮ್ಮು ಕಾಶ್ಮೀರ ಮಧ್ಯಾವಧಿ ಸಂವಿಧಾನ (13ನೇ ತಿದ್ದುಪಡಿ) 2018ರ ಕಾಯಿದೆಯು ಕಾನೂನು ಬಾಹಿರವಾಗಿದೆ. 

ಆದುದರಿಂದ ಪಾಕಿಸ್ಥಾನ ತನ್ನ ವಶದಲ್ಲಿರಿಸಿಕೊಂಡಿರುವ ಜಮ್ಮು ಕಾಶ್ಮೀರದ ಭೂಭಾಗವನ್ನು ತೆರವು ಗೊಳಿಸಿ ಭಾರತಕ್ಕೆ ಮರಳಿಸಬೇಕು ಎಂದು ಅತ್ಯಂತ ಸ್ಪಷ್ಟ ಶಬ್ದಗಳಲ್ಲಿ ರಾಜತಾಂತಿಕ ಮಾಧ್ಯಮದ ಮೂಲಕ ಪಾಕ್‌ ಸರಕಾರಕ್ಕೆ ತಿಳಿಸಲಾಗಿದೆ ಎಂದು ವಿದೇಶ ವ್ಯವಹಾರಗಳ ಸಚಿವಾಲಯ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next