Advertisement

ಭಾರತ, ಜಪಾನ್ ನಡುವೆ 15 ಮಹತ್ವದ ಒಪ್ಪಂದಗಳಿಗೆ ಸಹಿ

02:19 PM Sep 14, 2017 | Team Udayavani |

ಅಹಮದಾಬಾದ್: ಜಪಾನ್ ಮತ್ತು ಭಾರತದ ನಡುವೆ ಮತ್ತಷ್ಟು ಬಾಂಧವ್ಯ ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಉಭಯ ದೇಶಗಳು 15 ಮಹತ್ವದ ಒಪ್ಪಂದಗಳಿಗೆ ಗುರುವಾರ ಸಹಿ ಹಾಕಿವೆ.

Advertisement

ಗುಜರಾತ್ ನ ಗಾಂಧಿನಗದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. 2 ದಿನಗಳ ಭೇಟಿಗಾಗಿ ಆಗಮಿಸಿದ್ದ ಅಬೆ ಅವರು ಇಂದು ಅಹಮದಾಬಾದ್-ಮುಂಬೈ ಬುಲೆಟ್ ಟ್ರೇನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಭಾರತ ಮತ್ತು ಜಪಾನ್ ನಡುವಿನ 12ನೇ ವಾರ್ಷಿಕ ಶೃಂಗಸಭೆ ಹಿನ್ನೆಲೆಯಲ್ಲಿ ಉಭಯ ದೇಶಗಳು 15 ದ್ವಿಪಕ್ಷೀಯ ಒಪ್ಪಂಗಳಿಗೆ ಸಹಿ ಹಾಕಿವೆ. ಮೇಕ್ ಇನ್ ಇಂಡಿಯಾ ಯೋಜನೆಗೆ ಜಪಾನ್ ಕೂಡಾ ಪಾಲುದಾರ. ಎಲ್ಲಾ ರೀತಿಯಲ್ಲೂ ಭಾರತದ ಅಭಿವೃದ್ಧಿಗೆ ಜಪಾನ್ ಸಹಕಾರ ನೀಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಮಹತ್ವದ ಒಪ್ಪಂದಗಳಿಂದಾಗಿ ಎರಡೂ ದೇಶಗಳ ನಡುವಿನ ಆರ್ಥಿಕ ಸಹಕಾರ ವೃದ್ಧಿಯಾಗಲಿದೆ. ಭಾರತದಲ್ಲಿ ಬುಲೆಟ್ ಟ್ರೇನ್ ಯೋಜನೆ ಮಹತ್ವದ ಹೆಜ್ಜೆಯಾಗಿದೆ. ಜಪಾನ್ 3ನೇ ಅತೀ ದೊಡ್ಡ ಹೂಡಿಕೆ ರಾಷ್ಟ್ರವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next