Advertisement

Mallikarjun Kharge: ಮಟನ್‌-ಚಿಕನ್‌ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ: ಮೋದಿಗೆ ಖರ್ಗೆ

09:14 AM May 16, 2024 | Team Udayavani |

ಲಕ್ನೋ: “ಮಟನ್‌-ಚಿಕನ್‌, ಹಿಂದೂ-ಮುಸ್ಲಿಂ ವಿಚಾರಗಳನ್ನು ಬಿಟ್ಟು, ದೇಶದ ಅಭಿವೃದ್ಧಿ ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಗಮನಹರಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Advertisement

“ನಾನು ಮುಸ್ಲಿಂ ದ್ವೇಷಿ ಅಲ್ಲ. ನನಗೂ ಮುಸ್ಲಿಂ ಮಿತ್ರರಿದ್ದಾರೆ. ಹಿಂದೂ-ಮುಸ್ಲಿಂ ಎನ್ನುವ ವಿಚಾರಗಳನ್ನೇ ಬಂಡವಾಳವಾಗಿಸಿ ಕೊಂಡರೆ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಾಗುವುದಿಲ್ಲ’ ಎಂದು ಪ್ರಧಾನಿ ಸಂದರ್ಶನದಲ್ಲಿ ಹೇಳಿದ್ದಕ್ಕೆ ಖರ್ಗೆ ಈ ರೀತಿ ಟಾಂಗ್‌ ನೀಡಿದ್ದಾರೆ.

ಲಕ್ನೋದಲ್ಲಿ ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌ ಜತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ “ಮೋದಿ ಕಳೆದ 10 ವರ್ಷಗಳಲ್ಲಿ ಮಾಡಿದ ಕೆಲಸಗಳನ್ನು ಆಧಾರವಾಗಿಟ್ಟು ಕೊಂಡು ಯಾಕೆ ಮತ ಯಾಚಿಸುವುದಿಲ್ಲ? ಈ ವರೆಗೆ ಭಾಷಣಗಳಲ್ಲಿ ಮಟನ್‌, ಚಿಕನ್‌, ಬೀಫ್, ಫಿಶ್‌, ಮಂಗಳಸೂತ್ರ ಈ ಎಲ್ಲ ಪದಗಳನ್ನು ಬಳಸಿರುವುದು ಅವರೇ ಹೊರತು ನಾವಲ್ಲ’ ಎಂದರು.

ಜೂ.4ರ ಫ‌ಲಿತಾಂಶ ಬಳಿಕ ಇಂಡಿಯಾ ಒಕ್ಕೂಟ ಸರಕಾರ ರಚಿಸಲಿದೆ. ಆ ಬಳಿಕ ಬಡವರಿಗೆ ಬಿಜೆಪಿ ನೀಡುತ್ತಿರುವ 5 ಕೆ.ಜಿ. ಪಡಿತರದ ಪ್ರಮಾಣವನ್ನು 10 ಕೆ.ಜಿ.ಗೆ ಹೆಚ್ಚಿಸಲಾಗುತ್ತದೆ ಎಂದರು.

ಇದನ್ನೂ ಓದಿ: Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ ಮೇಲೆ ಗುಂಡಿನ ದಾಳಿ…

Advertisement
Advertisement

Udayavani is now on Telegram. Click here to join our channel and stay updated with the latest news.

Next