Advertisement

ಸಹಬಾಳ್ವೆಗೆ ಭಾರತ ಉತ್ತಮ ತಾಣ: ಖಾದರ್‌

11:33 AM May 10, 2017 | |

ಉಳ್ಳಾಲ: ಭಾರತ ಸಹಬಾಳ್ವೆಗೆ ಉತ್ತಮ ತಾಣವಾಗಿದೆ. ದೇಶ ಮಾನವೀಯತೆ ಮತ್ತು ಸಂಸ್ಕೃತಿ ಆಧಾರದಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಸಚಿವ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು. ಅವರು ಹೊಸದಿಲ್ಲಿಯ ರಾಷ್ಟ್ರೀಯ ಯುವ ಯೋಜನೆ, ಯೇನಪೊಯ ವಿ.ವಿ.ಯ ರಾಷ್ಟ್ರೀಯ ಸೇವಾ ಯೋಜನೆ, ರಾಜ್ಯ ಸರಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಆಶ್ರಯದಲ್ಲಿ ದೇರಳಕಟ್ಟೆ ಯೇನಪೊಯ ವಿಶ್ವವಿದ್ಯಾ ನಿಲಯದಲ್ಲಿ ಸೋಮವಾರ ನಡೆದ ಯುವಜನತೆಗಾಗಿ ರಾಷ್ಟ್ರೀಯ ಏಕೀಕರಣ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.

Advertisement

ಮುಖ್ಯ ಅತಿಥಿಯಾಗಿದ್ದ ನಿಟ್ಟೆ ವಿ.ವಿ. ಕುಲಾಪತಿ ಎನ್‌. ವಿನಯ ಹೆಗ್ಡೆ ಮಾತನಾಡಿ, ನೈಜ ರಾಷ್ಟ್ರೀಯ ಏಕತೆ ಹೃದಯದಿಂದ ಬರಬೇಕು. ಭಾರತೀಯ ಪ್ರಜೆಗಳಾಗಿ ನಾವು ಪ್ರತಿಯೊಬ್ಬರೂ ಬಲಶಾಲಿಯಾದ ದೇಶ ನಿರ್ಮಿಸುವ ಜವಾಬ್ದಾರಿ ಹೊಂದಿದ್ದೇವೆ ಎಂದರು. ರಾಷ್ಟ್ರೀಯ ಯುವಜನ ಯೋಜನೆ ನಿರ್ದೇಶಕ ಡಾ| ಎಸ್‌.ಎನ್‌. ಸುಬ್ಬರಾವ್‌ ಮಾಹಿತಿ ನೀಡಿದರು. ಯೇನಪೊಯ ವಿ.ವಿ. ಉಪಕುಲಪತಿ ಡಾ| ಎಂ. ವಿಜಯ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ಮಿಲಾಗ್ರಿಸ್‌ ಚರ್ಚ್‌ ನ ಧರ್ಮಗುರು ಫಾ| ವೆಲೇರಿಯನ್‌ ಡಿ’ಸೋಜಾ ಮತ್ತು ಎಂಫಾರ್‌ ಕನ್‌ಸ್ಟ್ರಕ್ಷನ್‌ ಪ್ರೈ. ಲಿ.ನ ಡಿಜಿಎಂ ಅನಿಲ್‌ ಭಂಡಾರಿ ಉಪಸ್ಥಿತರಿದ್ದರು. ಯೇನಪೊಯ ವಿ.ವಿ. ಕುಲಸಚಿವ ಡಾ| ಶ್ರೀಕುಮಾರ್‌ ಮೆನನ್‌ ಸ್ವಾಗತಿಸಿದರು. ಶಿಬಿರದ ಸಂಘಟನ ಕಾರ್ಯದರ್ಶಿ ಅನಿಲ್‌ ಹೆಬ್ಟಾರ್‌ ವರದಿ ಮಂಡಿಸಿದರು. ಶಿಬಿರದ ಸಂಘಟನ ಕಾರ್ಯದರ್ಶಿ ಯೇನಪೊಯ ವಿ.ವಿ.ಯ ಎನ್‌ಎಸ್‌ಎಸ್‌ ಸಂಯೋಜಕಿ ಡಾ| ಅಶ್ವಿ‌ನಿ ಎಸ್‌. ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next