Advertisement

ಭಾರತ ವಿಶ್ವಕ್ಕೆ ಗುರುವಾಗುವ ದಿನ ದೂರವಿಲ್ಲ

02:41 PM Jun 18, 2017 | |

ಹುಬ್ಬಳ್ಳಿ: ಯುವ ಜನಾಂಗದ ಜ್ಞಾನದಿಂದಲೇ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಅವರ ಜ್ಞಾನದಿಂದಾಗಿಯೇ ವಿಶ್ವದಲ್ಲಿಯೇ ಬೆಂಗಳೂರು ಸಿಲಿಕಾನ್‌ ಸಿಟಿಯಾಗಿ ಬೆಳೆದಿದೆ. ಯುವಕರು ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು, ಕೌಶಲವಂತರಾಗಬೇಕೆಂದು ಕೇಂದ್ರದ ಪೆಟ್ರೋಲಿಯಂ ಖಾತೆ ಸಹಾಯಕ ಸಚಿವ ಧರ್ಮೇಂದ್ರ ಪ್ರಧಾನ್‌ ಕರೆ ನೀಡಿದರು. 

Advertisement

ಇಲ್ಲಿನ ವಿದ್ಯಾನಗರದ ಬಿವಿಬಿ ಇಂಜನಿಯರಿಂಗ್‌ ಕಾಲೇಜ್‌ನ ಬಯೋಟೆಕ್‌ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಏಕ್‌ ಭಾರತ ಶ್ರೇಷ್ಠ ಭಾರತ’ ಕುರಿತ ಯುವ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯೂರೋಪ್‌ ಖಂಡ ಆರ್ಥಿಕ ದುರ್ಬಲತೆಯಿಂದ ನರಳಾಡುತ್ತಿದೆ. 20ನೇ ಶತಮಾನದಲ್ಲಿ ಬಲಾಡ್ಯತೆ ಮೆರೆದು ದೊಡ್ಡಣ್ಣನಾಗಿರುವ ಅಮೆರಿಕ ಚಿಕ್ಕಣ್ಣನಾಗುತ್ತಿದ್ದಾನೆ.

ಚೀನಾ ಸಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಸದ್ಯ ಅಮೆರಿಕ ಮತ್ತು ಚೀನಾ ಹೊರತುಪಡಿಸಿದರೆ ಅತಿ ಹೆಚ್ಚು ಇಂಧನ ಬಳಕೆ ಮಾಡುತ್ತಿರುವ ದೇಶ ಭಾರತವಾಗಿದೆ. ಆದ್ದರಿಂದ 21ನೇ ಶತಮಾನವು ಭಾರತದ್ದಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಭಾರತ ನಿರ್ಮಿಸಲು ಮುಂದಾಗಿದ್ದಾರೆ ಎಂದರು. 

ಹುಬ್ಬಳ್ಳಿ ನೆನಪಿಸಿಕೊಂಡ ಸಚಿವರು: 14 ವರ್ಷದ ಹಿಂದೆ ನಾನು ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ್ದ ನೆನಪು ಈಗಲೂ ಇದೆ. ಅಂದು ಈದ್ಗಾ ಮೈದಾನದಲ್ಲಿ ತಿರಂಗಾ ಧ್ವಜ ಹಾರಿಸುವ ವಿಷಯವಾಗಿ ಸಚಿವೆ ಉಮಾ ಭಾರತಿ ಅವರನ್ನು ಬಂಧಿಸಲಾಗಿತ್ತು ಎಂದು ನೆನಪಿಸಿಕೊಂಡರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸದ ಪ್ರಲ್ಹಾದ ಜೋಶಿ, ವಿಶ್ವದ ಯಾವುದೇ ದೇಶದಲ್ಲಿ ಭಯೋತ್ಪಾದಕರನ್ನು ಹತ್ಯೆಗೈದರೆ ಮಾನವ ಹಕ್ಕುಗಳು ಅನ್ವಯಿಸಲ್ಲ. ಆದರೆ ಭಾರತ ಭೌಗೋಳಿಕವಾಗಿ ಒಂದಾಗಿದ್ದರು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಇನ್ನಿತರೆಡೆ ಮಾನವ ಹಕ್ಕು ಅನ್ವಯವಾಗುತ್ತದೆ.

Advertisement

ಇದು ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ದೇಶದಲ್ಲಿ ಸೇನೆಯ ಮೇಲೆ ಕಲ್ಲು ಎಸೆಯುವವರು ಇದ್ದಾರೆ. ಇಂತಹ ಮನಸ್ಥಿತಿ ಬದಲಾಯಿಸಿ ಎಲ್ಲರನ್ನೂ ಒಂದುಗೂಡಬೇಕಿದೆ ಎಂದರು. ವಿಧಾನ ಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್‌, ಸಂಸದ ಸುರೇಶ ಅಂಗಡಿ, ವಿಧಾನ ಪರಿಷತ್‌ ಸದಸ್ಯರಾದ ಪ್ರಭಾಕರ ಕೋರೆ, ಪ್ರದೀಪ ಶೆಟ್ಟರ, ಮಹಾಂತೇಶ ಕವಟಗಿಮಠ, ಶಾಸಕ ಬಸವರಾಜ ಬೊಮ್ಮಾಯಿ, ಮಹಾಪೌರ ಡಿ.ಕೆ. ಚವ್ಹಾಣ,

-ಉಪ ಮಹಾಪೌರ ಲಕ್ಷೀಬಾಯಿ ಬಿಜವಾಡ, ಮಾಜಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ,  ವೀರಭದ್ರಪ್ಪ ಹಾಲಹರವಿ, ಸಂಜಯ ಪಾಟೀಲ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾ. ನಾಗರಾಜ, ಶಂಕರಣ್ಣ ಮುನವಳ್ಳಿ, ಡಾ| ಅಶೋಕ ಶೆಟ್ಟರ, ರಘು ಅಕ್ಮಂಚಿ ಮೊದಲಾದವರಿದ್ದರು. ರಾಜು ಜರತಾರಘರ ಸ್ವಾಗತಿಸಿದರು. ಮಹೇಂದ್ರ ಕೌತಾಳ ನಿರೂಪಿಸಿದರು. ಜಗದೀಶ ಬುಳ್ಳಣ್ಣವರ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next