Advertisement

ಸ್ತ್ರೀಯರಿಗೆ ಭಾರತ ಅಪಾಯಕಾರಿ

12:04 PM Jun 27, 2018 | Team Udayavani |

ಜಗತ್ತಿನಲ್ಲೇ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶ ಭಾರತ. ಹೀಗೆಂದು ಹೇಳಿರುವುದು ಥಾಮ್ಸನ್‌ ರಾಯಿಟರ್ಸ್‌ ಫೌಂಡೇಷನ್‌ ನಡೆಸಿದ ಸಮೀಕ್ಷೆ. ವಿಶ್ವಾದ್ಯಂತದ 548 ಮಂದಿಯ ಅಭಿಪ್ರಾಯ ಪಡೆದು ಈ ತೀರ್ಮಾನಕ್ಕೆ ಬರಲಾಗಿದೆ. ಈ ಸಮೀಕ್ಷೆಯ ಕುರಿತು ಮಾಹಿತಿ ಇಲ್ಲಿದೆ.

Advertisement

ಸಮೀಕ್ಷೆ ಮಾಡಿದ್ದು?
ಥಾಮ್ಸನ್‌ ರಾಯಿಟರ್ಸ್‌ 
ಫೌಂಡೇಷನ್‌ನ 550 ತಜ್ಞರು

ನಡೆದಿದ್ದು ಹೇಗೆ?
ಮಾ.26ರಿಂದ ಮೇ 4ರವರೆಗೆ ಆನ್‌ಲೈನ್‌, ಫೋನ್‌ ಹಾಗೂ ಖುದ್ದು ಭೇಟಿಯ ಮೂಲಕ ವಿಶ್ವಾದ್ಯಂತದ 548 ಮಂದಿಯ ಅಭಿಪ್ರಾಯ ಸಂಗ್ರಹ

2011ರ ಸಮೀಕ್ಷೆಯಲ್ಲಿ ಅಫ್ಘಾನ್ ಮೊದಲ ಸ್ಥಾನದಲ್ಲಿತ್ತು. ನಂತರದ ಸ್ಥಾನಗಳನ್ನು ರಿಪಬ್ಲಿಕ್‌ ಆಫ್ ಕಾಂಗೋ, ಪಾಕಿಸ್ತಾನ, ಭಾರತ ಮತ್ತು ಸೊಮಾಲಿಯಾ ಇತ್ತು.

83% 2007ರಿಂದ 2016ರ ಅವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಆದ ಹೆಚ್ಚಳ
04 ಪ್ರತಿ ಗಂಟೆಗೆ ಭಾರತದಲ್ಲಿ ದಾಖಲಾಗುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ.

Advertisement

10ನೇ ಸ್ಥಾನ ಅಮೆರಿಕಕ್ಕೆ ಇತ್ತೀಚಿನ ತಿಂಗಳಲ್ಲಿ ಅಮೆರಿಕದಾದ್ಯಂತ ಲೈಂಗಿಕ ದೌರ್ಜನ್ಯದ ವಿರುದ್ಧ ನಡೆದ “ಮೀ ಟೂ’ ಮತ್ತು “ಟೈಮ್‌ ಈಸ್‌ ಅಪ್‌’ ಅಭಿಯಾನವು ಅಮೆರಿಕವನ್ನು ಟಾಪ್‌ 10ರ ಸ್ಥಾನಕ್ಕೆ ಕೊಂಡೊಯ್ದಿದೆ. 

ಸಮೀಕ್ಷೆ ಹೇಳಿದ್ದೇನು?
ಭಾರತದಲ್ಲಿ ನಿರ್ಭಯಾ ಪ್ರಕರಣದ ಬಳಿಕವೂ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆದಿಲ್ಲ ಎಂದು ವರದಿ ಹೇಳಿದೆ. ಜತೆಗೆ, ಭಾರತವು ಮಾನವ ಕಳ್ಳಸಾಗಣೆ, ಲೈಂಗಿಕ ದಾಸ್ಯ, ಲೈಂಗಿಕೇತರ ಹಿಂಸೆ, ಹೆಣ್ಣು ಭ್ರೂಣ ಹತ್ಯೆ, ಒತ್ತಾಯಪೂರ್ವಕ ವಿವಾಹ ಮತ್ತಿತರ ವಿಚಾರಗಳಲ್ಲಿ ಅತ್ಯಂತ ಅಪಾಯಕಾರಿ ದೇಶ ಎಂಬ ಕುಖ್ಯಾತಿಗೂ ಪಾತ್ರವಾಗಿದೆ ಎಂದಿದೆ.

ಸಮೀಕ್ಷೆ ತಿರಸ್ಕರಿಸಿದ ಭಾರತ
ಭಾರತವು ಅಪಾಯಕಾರಿ ದೇಶ ಎಂಬ ಸಮೀಕ್ಷಾ ವರದಿಯನ್ನು ರಾಷ್ಟ್ರೀಯ ಮಹಿಳಾ ಆಯೋಗ ಸಾರಾಸಗಟಾಗಿ ತಿರಸ್ಕರಿಸಿದೆ. ಪಟ್ಟಿಯಲ್ಲಿ ಭಾರತದ ನಂತರ ಬರುವ ಅನೇಕ ದೇಶಗಳಲ್ಲಿ ಮಹಿಳೆಯರಿಗೆ ಸಾರ್ವಜನಿಕವಾಗಿ ಮಾತನಾಡುವ ಅವಕಾಶವೂ ಇಲ್ಲ. ಇನ್ನು ಸಮೀಕ್ಷೆಯಲ್ಲಿ ಬಹಳ ಕಡಿಮೆ ಮಂದಿಯ ಅಭಿಪ್ರಾಯ ಪಡೆಯಲಾಗಿದೆ. ಅದನ್ನು ಇಡೀ ದೇಶದ ಪ್ರಾತಿನಿಧಿತ್ವ ಎಂದು ಪರಿಗಣಿಸಲಾಗದು ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next